ರೊಕ್ಕಿಲ್ಲ… ಏನಿಲ್ಲಾ.. ಚಾರ್ಜ್ ತುಗೋಳಾಕ್ ಒಲ್ಲೇ ಅಂದೇನಿ: ಬಿಜೆಪಿ ಶಾಸಕರ ಹೇಳಿಕೆ
ಚಿಕ್ಕೋಡಿ: ಖಾದಿ ಗ್ರಾಮೋದ್ಯೋಗ ನಿಗಮದಲ್ಲಿ ಮೊದಲೇ ರೊಕ್ಕಯಿಲ್ಲ. ಅದನ್ನ ತೆಗೆದುಕೊಂಡು ನನ್ನ ಕ್ಷೇತ್ರದ ಅಭಿವೃದ್ಧಿಯನ್ನೂ ಮಾಡೋಕೆ ಆಗಲ್ಲ. ಹೀಗಾಗಿ ನಾನು ನಿಗಮದ ಚಾರ್ಜ ತೆಗೆದುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿಗೆ ಹೇಳಿದ್ದೇನೆಂದು ರಾಯಭಾಗ ಶಾಸಕ ದುರ್ಯೋಧನ ಐಹೋಳೆ ಹೇಳಿದ್ದಾರೆ.
ಮೂರು ಬಾರಿ ಗೆದ್ದಿರುವ ಶಾಸಕ ಡಿ.ಎಂ.ಐಹೋಳೆ, ತಮ್ಮದೇ ಸರಕಾರದ ಬಗ್ಗೆ ಅಸಮಾಧಾನವನ್ನ ಹೊರ ಹಾಕಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ನಿಗಮ ನೀಡಿದ್ದರೂ ಇಲ್ಲಿಯವರೆಗೆ ಅಧಿಕಾರ ಸ್ವೀಕಾರ ಮಾಡಿಲ್ಲ. ಇದೇ ಕಾರಣಕ್ಕೆ ಪ್ರಶ್ನಿಸಿದಾಗ, ನನಗೆ ಯಾವ ಮಂತ್ರಿಸ್ಥಾನ ಬೇಡ, ನನ್ನ ಕ್ಷೇತ್ರದ ಅಭಿವೃದ್ಧಿ ಮಾಡುವ ಒಳ್ಳೆಯ ಹುದ್ದೆ ನೀಡಿ. ನಾನು ಯಾವತ್ತೂ ಮಂತ್ರಿ ಸ್ಥಾನವನ್ನೂ ಕೇಳಿಲ್ಲ ಎಂದು ಬೇಸರವ್ಯಕ್ತಪಡಿಸಿದ್ರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ನನಗೆ ಈ ನಿಗಮ ಬೇಡವೇ ಬೇಡ ಎಂದು ಹೇಳಿದ್ದೇನೆ. ನಾಲ್ಕು ದಿನ ಕಾಯಲು ಹೇಳಿದ್ದಾರೆ. ಹೀಗಾಗಿ ನಾನು ನಿಗಮದ ಚಾರ್ಜ ತೆಗೆದುಕೊಳ್ಳುವುದಿಲ್ಲವೆಂದು ನೇರವಾಗಿ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷದ ಶಾಸಕರಲ್ಲೇ, ಸರಕಾರದ ತೀರ್ಮಾನಗಳು ಇರಿಸು-ಮುರಿಸು ಉಂಟು ಮಾಡುತ್ತಿವೆ ಎಂಬುದು ಈ ಮೂಲಕ ಹೊರಬಂದತಾಗಿದೆ.