ಸಿಂದಗಿ ಬಳಿ ರಸ್ತೆ ಅಪಘಾತ ಇಬ್ಬರ ದುರ್ಮರಣ
ವಿಜಯಪುರ: KSRTC ಬಸ್ ಚಾಲಕನ ನಿರ್ಲಕ್ಷ್ಯದಿಂದ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯಂಕಂಚಿಯಲ್ಲಿ ನಡೆದಿದೆ.
ಬೈಕ್ ನಲ್ಲಿ ತ್ರಿಬಲ್ ಹೋಗುತ್ತಿದವರಿಗೆ ಸರ್ಕಾರಿ ಬಸ್ ಡಿಕ್ಕಿಯಾಗಿ ಯಂಕಂಚಿ ನಿವಾಸಿಗಳಾದ ರಮೇಶ ಮುಳಸಾವಳಗಿ(35) ಹಾಗೂ ಬ್ಯಾಕೋಡ ನಿವಾಸಿ ತಿಪ್ಪಣ್ಣ ಭೈರೊಡಗಿ(30) ಸ್ಥಳದಲ್ಲೇ ಮೃತ ದುರ್ದೈವಿಗಳು. ಯಂಕಂಚಿಯಿಂದ ಸಿಂದಗಿಗೆ ಬೈಕ್ ಸವಾರರು ಬರುತ್ತಿದ್ದ ವೇಳೆ ಅವಘಡ ನಡೆದಿದೆ. ಮತ್ತೋರ್ವ ಹಿಂಬದಿಯ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಸಿಂದಗಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಇನ್ನು ಬಸ್ ಚಾಲಕನನ್ನು ಸಿಂದಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಕ್ಕಿಯ ರಭಸಕ್ಕೆ ಹಿಂಬದಿಯ ಸವಾರ ಸುಮಾರು ದೂರ ಹೋಗಿ ಬಿದ್ದಿದ್ದು, ಅಲ್ಲಿಯೇ ಮೃತಪಟ್ಟಿದ್ದ.
ಘಟನೆ ನಡೆದ ತಕ್ಷಣವೇ ಬಸ್ ಚಾಲಕ ಪರಾರಿಯಾಗಿದ್ದರೂ, ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.