ಹೃದಯಾಘಾತ ಶಿಕ್ಷಕಿ ಸಾವು: ತಬ್ಬಲಿಯಾದ ಎರಡು ಮಕ್ಕಳು
ಬೀದರ: ಕೊರೋನಾ ವೈರಸ್ ಹಾವಳಿಯಲ್ಲೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದ ಘಟನೆ ನಗರದಲ್ಲಿ ನಡೆದಿದೆ.
ತಾಲೂಕಿನ ರೇಕುಳಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕಿರಣಪ್ರಿಯಾ ಸಾವನ್ನಪ್ಪಿದ್ದಾರೆ. ಕಳೆದ ರಾತ್ರಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಬೆಳಗಿನ ಜಾವ ಆಸ್ಪತ್ರೆಗೆ ಸಾಗಿಸುವಾಗಲೇ ಕಿರಣಪ್ರಿಯಾ ಶಿಕ್ಷಕಿ ಸಾವಿಗೀಡಾಗಿದ್ದಾರೆ.
ಇಬ್ಬರು ಮಕ್ಕಳನ್ನ ಹೊಂದಿರುವ ಶಿಕ್ಷಕಿ, ಸಾಕಷ್ಟು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ವಿದ್ಯಾಗಮ ಯೋಜನೆಯಲ್ಲೂ ಭಾಗವಹಿಸಿದ್ದರು. ವಿದ್ಯಾರ್ಥಿಗಳೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿದ್ದ ಶಿಕ್ಷಕಿಯ ಸಾವು, ವಲಯದಲ್ಲಿ ತೀವ್ರ ಥರದ ನೋವನ್ನುಂಟು ಮಾಡಿದೆ.
ಕಿರಣಪ್ರಿಯಾರ ಸಾವಿನ ಸುದ್ದಿ ಜಿಲ್ಲೆಯಲ್ಲಿ ತೀವ್ರ ಬೇಸರ ಮೂಡಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೀದರ ಜಿಲ್ಲೆಯ ಅಧ್ಯಕ್ಷ ಪಂಡಿತ, ಸೇರಿದಂತೆ ಎಲ್ಲ ಪದಾಧಿಕಾರಿಗಳು ಬಯಸಿದ್ದಾರೆ.