ಅಪಘಾತದಲ್ಲಿ ಅನಿಲಕುಮಾರ ಪಾಟೀಲ ದುರ್ಮರಣ: ಚಿಗರಿ ಬಸ್ ಗೆ ಬಲಿ
ಧಾರವಾಡ: ರಭಸವಾಗಿ ಬರುತ್ತಿದ್ದ ಚಿಗರಿ ಬಸ್ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ನವಲೂರು ಗ್ರಾಮದ ಬಳಿ ಸಂಭವಿಸಿದೆ.
ಧಾರವಾಡ ಓಂ ನಗರ ನಿವಾಸಿ ಅನಿಲಕುಮಾರ ಪಾಟೀಲ(45) ಮೃತ ದುರ್ದೈವಿಯಾಗಿದ್ದು, ಚಿಗರಿ ಬಸ್ ನ್ನ ಮುಂಭಾಗ ರಭಸವಾಗಿ ಬಡಿದ್ದರಿಂದ ತಲೆಗೆ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಈ ಬಗ್ಗೆ ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾದಚಾರಿಯಾಗಿದ್ದ ಅನಿಲಕುಮಾರ ಪಾಟೀಲ, ಶವವನ್ನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಓಝೋನ್ ಹೊಟೇಲ್ ನೌಕರನಾಗಿರುವ ಅನಿಲಕುಮಾರ ಪಾಟೀಲ, ಹನಮಂತಗೌಡ ಪಾಟೀಲರ ಮಗನಾಗಿದ್ದಾನೆ.