Exclusive-ಹುಬ್ಬಳ್ಳಿ: ಪ್ರಮುಖ “ಗಾಂಜಿ”ಗ ಪತ್ತೆ: ಕಾರು ಸಮೇತ ಸಿಕ್ಕ ಮಾಲೇಷ್ಟು ಗೊತ್ತಾ..?
1 min readಹುಬ್ಬಳ್ಳಿ: ಸೆಪ್ಟಂಬರ್ ಐದರಿಂದ ಪ್ರಕರಣವೊಂದನ್ನ ಭೇದಿಸಿದ್ದ ಉಪನಗರ ಠಾಣೆ ಪೊಲೀಸರು, ಅಂದು ಐದು ಕೆಜಿ ಗಾಂಜಾವನ್ನ ಹಿಡಿದು ಇಬ್ಬರನ್ನ ಬಂಧನ ಮಾಡಿದ್ದರು. ಇದೇ ಪ್ರಕರಣದ ಪ್ರಮುಖ ಆರೋಪಿಯನ್ನ ಕಾರು ಸಮೇತ ಬಂಧಿಸುವಲ್ಲೀಗ ಯಶಸ್ವಿಯಾಗಿದ್ದಾರೆ.
ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದ ಮಾರುತಿ ಹರಣಶಿಕಾರಿ ಮತ್ತು ಚಂದಪ್ಪ ಹರಣಶಿಕಾರಿ ಎಂಬಿಬ್ಬರನ್ನ ಬಂಧಿಸಿದ್ದ ಪೊಲೀಸರು 5 ಕೆಜಿ ಗಾಂಜಾವನ್ನ ವಶಕ್ಕೆ ಪಡೆದಿದ್ದರು. ಇದರಲ್ಲಿದ್ದ ವಿದ್ಯಾರ್ಥಿಯೋರ್ವನ ಬಗ್ಗೆ ಮಾಹಿತಿಯನ್ನೂ ನೀಡಿದ್ದರು.
ಇದೇ ಪ್ರಕರಣದ ಪ್ರಮುಖ ಆರೋಪಿ ಅಬ್ದುಲರಜಾಕ ಎಂಬಾತನನ್ನ ಆತನ ವೋಕ್ಸ್ ವ್ಯಾಗನ್ ಕಾರು ಸಮೇತ ಬಾಗಲಕೋಟೆಯ ಗದ್ದನಕೇರಿ ಕ್ರಾಸ್ ನಲ್ಲಿ ಬಂಧನ ಮಾಡಿದ್ದಾರೆ. ಆತನಿಂದ 1ಕೆಜಿ 10ಗ್ರಾಂ ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ. ಈತ ಪೂನಾ ಮತ್ತು ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಸಂಚರಿಸುತ್ತಿದ್ದನಾದರೂ, ವಿಜಯಪುರದಲ್ಲಿ ಹೆಚ್ಚು ವಾಸವಾಗಿರುತ್ತಿದ್ದ. ಖಚಿತ ಮಾಹಿತಿಯ ಮೇರೆಗೆ ಪ್ರಮುಖ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಉಪನಗರ ಠಾಣೆ ಇನ್ಸ್ ಪೆಕ್ಟರ್ ಹೊಳೆಣ್ಣನವರ ಮಾರ್ಗದರ್ಶನದಲ್ಲಿ ಪಿಎಸೈ ಕಾಲವಾಡ ಸಿಬ್ಬಂದಿಗಳಾದ ಉಮೇಶ ಹೆದ್ದೇರಿ, ಮಲ್ಲಿಕಾರ್ಜುನ ಧನಿಗೊಂಡ, ಸುನೀಲ ಪಾಂಡೆ, ಮಂಜು ಎಕ್ಕಡಿ, ರವಿ ಹೊಸಮನಿ, ರೇಣಪ್ಪ ಚಿಕ್ಕಲಿಗ್ಯಾರ, ಬಸವರಾಜ ಸುಣಗಾರ, ಕರಬಸಪ್ಪ ನೆಲಗುಡ್ಡ ಕಾರ್ಯಾಚರಣೆ ನಡೆಸಿದ್ದಾರೆ.