Karnataka Voice

Latest Kannada News

ದಾಂಡೇಲಿಯಲ್ಲಿ ರಾಯಚೂರಿನವರ ಬಂಧನ: ಗಾಂಜಾ ವಶ

Spread the love

ದಾಂಡೇಲಿ: ನಗರದ ದಂಡಕಾರಣ್ಯದ  ರಸ್ತೆಯಲ್ಲಿ ಗಾಂಜಾಯಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರನ್ನ ಬಂಧಿಸುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳು ಪ್ಲಾಸ್ಟಿಕ್ ಚೀಲದಲ್ಲಿಟ್ಟು ಗ್ರಾಹಕರಿಗೆ ಮಾರಾಟ ಮಾಡುವ ಯತ್ನದಲ್ಲಿದ್ದರು.

ಸುಮಾರು 38 ಸಾವಿರ ರೂಪಾಯಿ ಮೌಲ್ಯದ 1ಕೆಜಿ 942 ಗ್ರಾಂ ತೂಕದ ಗಾಂಜಾವನ್ನ ವಶಕ್ಕೆ ಪಡೆಯಲಾಗಿದ್ದು, ಜೊತೆಗೆ 1500 ರೂಪಾಯಿಗಳನ್ನ ಜಪ್ತಿ ಮಾಡಲಾಗಿದೆ.

ಬಂಧಿತರನ್ನ ರಾಯಚೂರು ಜಿಲ್ಲೆಯ ಇಂದಿರಾನಗರದ ಚಾಂದಪಾಷಾ ಶೇಖ ಶಾವಲಿ ಮತ್ತು ಸಿಂಧನೂರಿನ ಪ್ರಾಣೇಶ ಅಮಿತೋಷ ಸಾಣಾ ಎಂದು ಗುರುತಿಸಲಾಗಿದ್ದು, ದಾಂಡೇಲಿಯ ಪಟೇಲನಗರದ ಹುಸೇನಸಾಬ ಅಲಿಯಾಸ್ ಇಮ್ರಾನ ಶೇಖ ಹಾಗೂ ಮುಜಫರ ಖಾನ ಪರಾರಿಯಾಗಿದ್ದಾರೆ.

ಡಿವೈಎಸ್ಪಿ ಶಿವಾನಂದ ಚೆಲವಾದಿ ಹಾಗೂ ಸಿಪಿಐ ಪ್ರಭು ಗಂಗೇನಹಳ್ಳಿ ಮಾರ್ಗದರ್ಶನದಲ್ಲಿ ಪಿಎಸೈ ಎಸ್.ಯಲ್ಲಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಸವರಾಜ ವಕ್ಕುಂದ, ಪ್ರಶಾಂತ ನಾಯ್ಕ, ನಿಂಗಪ್ಪ ನರೇಗಲ, ಆದಪ್ಪ ಧಾರವಾಡಕರ, ಸಂತೋಷ ಚನ್ನಣ್ಣನವರ, ಚಿನ್ಮಯಾನಂದ ಪತ್ತಾರ, ಮಹ್ಮದ ಹನೀಫ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *