ಪತ್ರಕರ್ತ ಶಿವುಕುಮಾರ ಮೆಣಸಿನಕಾಯಿ ತಂದೆ ವಿಧಿವಶ
ಗದಗ: ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ರೇಲ್ವೆ ಉದ್ಯೋಗಿ ನಿಂಗಪ್ಪ ಗುರುಬಸಪ್ಪ ಮೆಣಸಿನಕಾಯಿ ಇಂದು ನಗರದಲ್ಲಿ ನಿಧನರಾಗಿದ್ದಾರೆ.
ಪತ್ರಕರ್ತರಾದ ಸಂಗಮೇಶ ಮೆಣಸಿನಕಾಯಿ ಹಾಗೂ ಶಿವಕುಮಾರ ಮೆಣಸಿನಕಾಯಿ ಅವರ ತಂದೆಯವರಾದ ನಿಂಗಪ್ಪ ಗುರುಬಸಪ್ಪ ಮೆಣಸಿನಕಾಯಿ ( 70) ನಿವೃತ್ತ ರೇಲ್ವೆ ಉದ್ಯೋಗಿಯಾಗಿದ್ದರು.
ರವಿವಾರ ಮುಂಜಾನೆ ಗದಗನಲ್ಲಿ ನಿಧನರಾದರು. ಮಧ್ಯಾಹ್ನ 3 ಘಂಟೆಗೆ ಅಂತಿಮ ಯಾತ್ರೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತರ ಸಾವಿಗೆ ಗದಗ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಎಂ.ಶರೀಫನವರ ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಧಾರವಾಡ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೋಳ್ಳಿ ಸೇರಿದಂತೆ ಇನ್ನುಳಿದ ಪದಾಧಿಕಾರಿಗಳು ಸಂತಾಪ ಸೂಚಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.