ನಿವೃತ್ತ ಪ್ರಾಂಶುಪಾಲರ ಬರ್ಭರ ಹತ್ಯೆ: ಮನಬಂದಂತೆ ಇರಿದ ದುಷ್ಕರ್ಮಿಗಳು
ಮೈಸೂರು: ದಾಂಪತ್ಯದಲ್ಲಿ ಭಿನ್ನಾಪ್ರಾಯವಾಗಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ ನಿವೃತ್ತ ಪ್ರಾಂಶುಪಾಲರು ಮನಬಂದಂತೆ ಇರಿದು ಧಾರುಣವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನ ನಿವೇದಿತ ನಗರದಲ್ಲಿ ತಡರಾತ್ರಿ ನಡೆದಿದೆ.
ಹಾಸನ ಸರ್ಕಾರಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿಯಾಗಿದ್ದ ಪರಶಿವಮೂರ್ತಿ ಹತ್ಯೆ ( 67) ಹತ್ಯೆಯಾದರಾಗಿದ್ದಾರೆ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯವಾಗಿ ಒಂಟಿಯಾಗಿ ವಾಸಿಸುತ್ತಿದ್ದರು. ಇದರ ಜೊತೆಗೆ ಲೇವಾದೇವಿ , ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು ಎಂದು ಹೇಳಲಾಗಿದೆ.
ರಾತ್ರಿ ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಹಿರಿಯ ಪೊಲೀಸ್ ಅಧಿಕಾರಿಗಳು ಶ್ವಾನದಳದ ಸಮೇತ ಬಂದು ಪರಿಶೀಲನೆ ನಡೆಸಿದರು. ನಿವೇದಿತನಗರದ ರಸ್ತೆಯ ಕೊನೆವರೆಗೂ ಹೋದ ಶ್ವಾನ ಮರಳಿ ಮನೆಯತ್ತ ಹೆಜ್ಜೆ ಹಾಕಿತು.
ಪ್ರತಿಷ್ಟಿತ ಪ್ರದೇಶದಲ್ಲಿ ಕೊಲೆಯಾಗಿದ್ದರಿಂದ ವಾತಾವರಣ ಆತಂಕದಲ್ಲಿ ಕೂಡಿದೆ. ಪ್ರಕರಣ ಸರಸ್ವತಿ ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.