Exclusive-ಧಾರವಾಡದಲ್ಲಿ ನಟೋರಿಯಸ್ ಜಾವೇದ್ ಡಲಾಯಿತ್ ಬಂಧನ- ಕೆಜಿಗಟ್ಟಲೇ ಬೆಳ್ಳಿ ವಶ
ಧಾರವಾಡ: ನಗರದಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಶಹರ ಠಾಣೆ ಪೊಲೀಸರು ಇಬ್ಬರನ್ನ ಬಂಧಿಸಿದ್ದು, ಇದರಲ್ಲಿ ಓರ್ವ ನಟೋರಿಯಸ್ ಕಳ್ಳನೂ ಸೇರಿದ್ದಾನೆ.
ಬಾಲಾಜಿ ಜ್ಯುವೇಲರ್ಸ್ ಅಂಗಡಿಯ ಮೇಲ್ಚಾವಣೆಗೆ ಹೊದಿಸಿದ ಸಿಮೆಂಟ ಸೀಟನ್ನು ಒಡೆದು ಒಳಗಡೆ ಇರುವ ಪಿ ಓ ಪಿ ಹೊದಿಕೆಯನ್ನು ಕಟ್ಟು ಮಾಡಿ ಅಂಗಡಿ ಒಳಗೆ ಇಳಿದು ಕೌಂಟರ್ ಕೆಳಗಡೆ ಇಟ್ಟಿದ್ದ ಹಳೇ ಬೆಳ್ಳಿ ಸಾಮಾನುಗಳಾದ ಕಾಲುಂಗರಗಳು, ಬ್ರಾಸ್‍ಲೇಟಗಳು, ಸಣ್ಣ ಮಕ್ಕಳ ಕೈಕಡಗಗಳು, ಕಾಲಚೈನುಗಳನ್ನ ಕಳ್ಳತನ ಮಾಡಲಾಗಿತ್ತು.
ತನಿಖೆ ನಡೆಸಿದ ಶಹರ ಠಾಣೆಯ ಪೊಲೀಸರು ಮದಾರಮಡ್ಡಿಯ ಜಾವೀದ ಶಾಮೀದಅಲಿ ಡಲಾಯತ ಹಾಗೂ ಆಜಾದನಗರದ ಪ್ರಜ್ವಲ್ ತಂದೆ ಲಕ್ಷ್ಮಣ ಮಾದರ ಬಂಧಿಸಿ ಅವರಿಂದ 2000 ಗ್ರಾಂ ತೂಕದ ಹಳೇ ಬೆಳ್ಳಿಯ ಸಾಮಾನುಗಳಾದ ಕಾಲುಂಗರಗಳು, ಬ್ರಾಸ್‍ಲೇಟಗಳು, ಸಣ್ಣ ಮಕ್ಕಳ ಕೈಕಡಗಗಳು, ಕಾಲಚೈನುಗಳನ್ನ ವಶಪಡಿಸಿಕೊಳ್ಳಲಾಗಿದೆ.
ಧಾರವಾಡ ಶಹರ ಪೊಲೀಸ್ ಠಾಣೆಯ ಪೊಲೀಸ ಇನ್ಸಪೆಕ್ಟರ ಶ್ರೀಧರ ಸತಾರೆ, ಹಾಗೂ ವಿದ್ಯಾಗಿರಿ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ಮಹಾಂತೇಶ ಬಸಾಪೂರ ಮಾರ್ಗದರ್ಶನದಲ್ಲಿ ಧಾರವಾಡ ಶಹರ ಠಾಣೆಯ ಪೊಲೀಸ ಸಬ್ ಇನ್ಸಪೆಕ್ಟರ ಎಲ್.ಕೆ. ಕೊಡಬಾಳ ಹಾಗೂ ಎಎಸ್‍ಐ ಎಂ.ವಾಯ್.ಕುರ್ತಕೋಟಿ ಮತ್ತು ಸಿಬ್ಬಂದಿಗಳಾದ ಬಿ.ಎಚ್.ಶಿಂಗಣ್ಣವರ, ಬಿ.ಎಂ.ಮುಲ್ಲಾನವರ, ಜಿ.ಜಿ.ಚಿಕ್ಕಮಠ, ಎನ್.ಓ.ಜಾಧವ, ಎಸ್.ಸಿ.ಪಾಟೀಲ, ಅನಂತ ಚವ್ಹಾಣ, ಯು.ಎನ್.ಸಣ್ಣಿಂಗನವರ, ಡಿ.ವಾಯ್.ಮನ್ನಿಕೇರಿ, ಎಲ್.ಎಸ್.ಲಮಾಣಿ, ಪರಮೇಶ್ವರ ಕುರಿ, ಮೌನೇಶ ಚವ್ಹಾಣ, ಆರ್.ವ್ಹಿ.ಹೊಸವಾಳ, ಗಾಯತ್ರಿ ತಿರ್ಲಾಪೂರ, ಮಾರುತಿ ಬಡವಣ್ಣವರ, ಗುರುನಾಥ ಚಂದರಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.