ಧಾರವಾಡದಲ್ಲೂ ಇದ್ದ ನಕಲಿ ಎಸಿಬಿ ಅಧಿಕಾರಿ- ಬೈಲಹೊಂಗಲದಲ್ಲಿ ಬಂಧನ
ಬೆಳಗಾವಿ: ತಾವೂ ಎಸಿಬಿ ಅಧಿಕಾರಿಗಳೆಂದು, ಸಹಾಯಕ ಕೃಷಿ ಅಧಿಕಾರಿಗೆ ಬೇನಾಮಿ ಆಸ್ತಿಯ ಭಯ ಹುಟ್ಟಿಸಿ ಹಣ ಮಾಡಲು ಹೊರಟಿದ್ದ ಇಬ್ಬರನ್ನ ಬಂಧಿಸುವಲ್ಲಿ ಬೈಲಹೊಂಗಲ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಬಿ.ಆರ್.ಹುಲಗಣ್ಣವರ ಅವರಿಗೆ ಕರೆ ಮಾಡಿ ನಿಮ್ಮ ಮೇಲೆ ಬೇನಾಮಿ ಆಸ್ತಿ ಸಂಪಾದಿಸಿದ ಬಗ್ಗೆ ಮಾಹಿತಿ ಬಂದಿದೆಯಂದೂ, ತಾವೂ ಎಸಿಬಿ ಅಧಿಕಾರಿಗಳೆಂದು ಹೇಳಿದ್ದಾರೆ. ನಿಮ್ಮ ತನಿಖೆ ನಡೆಯಬಾರದೆಂದರೇ 5 ಲಕ್ಷ ರೂ. ಹಣ ನೀಡಿ ಕೇಸ್ ಬಗೆಹರಿಸಿಕೊಳ್ಳಬೇಕು ಎಂದು ಬೇಡಿಕೆಯಿಟ್ಟಿದ್ದರು.
ತಕ್ಷಣವೇ ಎಚ್ಚೆತ್ತುಗೊಂಡಿದ್ದ ಕೃಷಿ ಅಧಿಕಾರಿ ಬಿ.ಆರ್.ಹುಲಗಣ್ಣವರ ಬೈಲಹೊಂಗಲ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣವೇ ಜಾಗೃತರಾಗಿದ್ದ ಪೊಲೀಸರು ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದ ನಿವಾಸಿ ವಿಶಾಲ ಭಾಂವೆಪ್ಪ ಪಾಟೀಲ, ಬೆಂಗಳೂರು ಕೊಡಗೇಹಳ್ಳಿ ಸಹಕಾರ ನಗರದ ನಿವಾಸಿ ಶ್ರೀನಿವಾಸ ಅಶ್ವತ್ಥ ನಾರಾಯಣ ಎಂಬ ನಕಲಿ ಎಸಿಬಿ ಅಧಿಕಾರಿಗಳನ್ನ ಬಂಧನ ಮಾಡಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಮೊಬೈಲ್, ಒಂದು ಕಾರು ವಶಕ್ಕೆ ಪಡೆದಿದ್ದಾರೆ.
ಬೈಲಹೊಂಗಲ ಪಿಎಸ್‍ಐ ಈರಪ್ಪ ಎಚ್.ರಿತ್ತಿ, ಸಿಬ್ಬಂದಿಯಾದ ಎಂ.ಬಿ.ವಸ್ತ್ರದ, ಎಸ್.ಯು. ಮೆಣಸಿನಕಾಯಿ, ಯು.ಎಸ್.ಪೂಜಾರ, ಎಲ್.ಬಿ.ಹಮಾನಿ ಎಲ್.ಎಸ್.ಹೊಸಮನಿ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.