ಕಲಘಟಗಿ ಪತ್ರಕರ್ತರಿಗೆ ಗೌರವ: ಕರ್ತವ್ಯ ಸ್ಮರಣೆ ಮಾಡಿದ ತಾಪಂ
ಧಾರವಾಡ: ಮಹಾಮಾರಿ ಕೊರೋನಾ ಸಮಯದಲ್ಲಿಯೂ ನಿರಂತರವಾಗಿ ಕರ್ತವ್ಯದಲ್ಲಿ ತೊಡಗಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವಲ್ಲಿ ನಿರವಾಗಿರುವ ಜಿಲ್ಲೆಯ ಕಲಘಟಗಿ ಪತ್ರಕರ್ತರಿಗೆ ತಾಲೂಕು ಪಂಚಾಯತಿಯಿಂದ ಸನ್ಮಾನಿಸಲಾಯಿತು.
ಲಾಕ ಡೌನ ಸಂದರ್ಭದಲ್ಲಿ ತಾಲೂಕಿನಲ್ಲಿ ಅತ್ಯುತ್ತಮವಾಗಿ ತಾಲೂಕಿನ ಎಲ್ಲ ಪತ್ರಕರ್ತರು ಸೇವೆ ಸಲ್ಲಿಸಿದ್ದಕ್ಕಾಗಿ ತಾಲೂಕು ಪಂಚಾಯಿತಿ ವತಿಯಿಂದ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಸಂಘದ ಅಧ್ಯಕ್ಷ ರಮೇಶ್ ಸೋಲಾರಗೊಪ್ಪ ತಾಲೂಕಿನ ಪತ್ರಕರ್ತರ ಪರವಾಗಿ ಸತ್ಕಾರ ಸ್ವೀಕರಿಸಿದರು.
ಇದೇ ಸಮಯದಲ್ಲಿ ತಾಲೂಕು ತಾಲೂಕ ವೈದ್ಯಾಧಿಕಾರಿ ಡಾ ಬಸವರಾಜ್ ಬಾಸೂರ, ವೈದ್ಯಕೀಯ ಸೇವೆಯನ್ನು ಪರಿಗಣಿಸಿ ತಾಪಂ ಸಾಮಾನ್ಯ ಸಭೆಯಲ್ಲಿ ಸನ್ಮಾನಿಸಲಾಯಿತು.
ತಾಪಂ ಅಧ್ಯಕ್ಷೆ ಸುನೀತಾ ಮ್ಯಾಗೀನಮನಿ, ಉಪಾಧ್ಯಕ್ಷ ಚಂದ್ರ ಗೌಡ ಪಾಟೀಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ಮೇಟಿ ಸೇರಿದಂತೆ ಸದಸ್ಯರು, ಸಿಬ್ಬಂದಿ ಹಾಗೂ ತಾಲೂಕಿನ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.