Exclusive-ಹುಬ್ಬಳ್ಳಿಯ ಹಳೇ ಕಳ್ಳ-ಹೊಸ ಕಳುವು ಪತ್ತೆ: ಸಿಕ್ಕವನಿಂದ ಬರೋಬ್ಬರಿ 9ಲಕ್ಷದ ಚಿನ್ನಾಭರಣ ವಶ
ಹುಬ್ಬಳ್ಳಿ: ನಿರಂತರವಾಗಿ ಮನೆಗಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಆರೋಪಿ ಸುಮಾರು ಮೂರು ವರ್ಷಗಳ ನಂತರ ಮತ್ತೆ ಹಳೇಹುಬ್ಬಳ್ಳಿ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, 8ಲಕ್ಷ 84 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಹುಬ್ಬಳ್ಳಿಯ ನಂದೀಶ ಉಮೇಶ ಸಕ್ರೆಪ್ಪನವರ ಎಂಬ ಕಳ್ಳನನ್ನೇ ಪೊಲೀಸರು ಬಂಧಿಸಿದ್ದು, 6 ಮನೆಗಳ್ಳತನ ಪ್ರಕರಣಗಳು ಬಯಲಾಗಿವೆ. ನಂದೀಶ, ಈ ಹಿಂದೆಯೂ ಮನೆಗಳ್ಳತನವನ್ನೇ ಮಾಡುತ್ತಿದ್ದ. ಆದರೆ, ಕೆಲವು ದಿನಗಳಿಂದ ತಾನೂ ಸುಧಾರಿಸಿದ್ದಾಗಿ ಹೇಳಿಕೊಳ್ಳುತ್ತ ತಿರುಗುತ್ತಿದ್ದ.
ನಗರದಲ್ಲಿ ಮತ್ತೆ ಕಳ್ಳತನ ನಡೆಯುತ್ತಿರುವುದು ಬೆಳಕಿಗೆ ಬಂದ ನಂತರ ಆರೋಪಿಯನ್ನ ಬಂಧನ ಮಾಡಿದಾಗ, ನಂದೀಶ ಸುಧಾರಿಸುವ ಕಳ್ಳನಲ್ಲ ಎಂದು ಗೊತ್ತಾಗಿದೆ. ತಮ್ಮದೇ ರಿತಿಯಲ್ಲಿ ವಿಚಾರಣೆ ಮಾಡಿದಾಗ, ಒಬ್ಬನೇ ಹೋಗಿ ಮನೆಯ ಬಾಗಿಲನ್ನ ಮುರಿದು ಕಳ್ಳತನ ಮಾಡುತ್ತಿರುವುದನ್ನ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ 8.84.000 ಸಾವಿರ ಮೌಲ್ಯದ ಬೆಲೆಬಾಳುವ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.
ಆರೋಪಿಯನ್ನ ಬಂಧಿಸುವಲ್ಲಿ ಇನ್ಸಪೆಕ್ಟರ ಸತೀಶ ಮಾಳಗೊಂಡ, ಎಎಸ್ಐ ದೊಡ್ಡಮನಿ, ಸಿಬ್ಬಂದಿಗಳಾದ ಟಿ.ಜಿ.ಪುರಾಣೀಕಮಠ, ಎನ್.ಎಂ ಪಾಟೀಲ, ಗುಡಗೇರಿ, ಕೃಷ್ಣಾ ಮೊಟೆಬೆನ್ನೂರ,ಅಂಬಿಗೇರ, ಎಂ.ಬಿ.ಪಾಟೀಲ, ಮಾರುತಿ ಭಜಂತ್ರಿ, ಬಾಬಾಜಾನ, ಷಣ್ಮುಖ ಯಶಸ್ವಿಯಾಗಿದ್ದಾರೆ.