‘ಮಾಂಝಾಗೆ’ ಪೊಲೀಸರ ‘ಮಾಂಜಾ’- ಆರಕ್ಷಕರಿಗೆ ಹೊಸ ಟಾಸ್ಕ್
ಬೆಳಗಾವಿ: ಮಳೆಯಿಂದ ತತ್ತರಿಸಿ ಸ್ವಚಂದವಾಗಿ ಸವಾರಿ ಮಾಡುವ ಜನರಿಗೆ ಗಾಳಿಪಟದ ಮಾಂಝಾ ದಾರ ಜೀವಕ್ಕೆ ಮುಳುವಾಗುವ ಸ್ಥಿತಿಗಳು ಬಂದಿರುವುದು ನಗರದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಮನೆಯ ಮೇಲೆ ನಿಂತು ಗಾಳಿಪಟ ಹಾರಿಸುವ ಬಹುತೇಕ ಯುವಕರು, ಮತ್ತೊಂದು ಬದಿಯಲ್ಲಿ ಹಾರಿಸುವ ಗಾಳಿಪಟವನ್ನ ಕತ್ತರಿಸಿಬೇಕೆಂದು ಈ ಮಾಂಝಾ ದಾರವನ್ನ ಬಳಕೆ ಮಾಡುತ್ತಾರೆ. ಆದರೆ, ಅದೇ ದಾರ ಸಂಚಾರ ಮಾಡುವ ಜನರಿಗೆ ಮುಳುವಾಗಿದೆ.
ನಗರದಲ್ಲಿ ಈಗಾಗಲೇ ಮಾಂಝಾ ದಾರದಿಂದ ಹಲವರು ಗಾಯಗೊಂಡಿದ್ದಾರೆ. ಕೊರಳಿಗೆ ಸಿಕ್ಕಿಕೊಂಡು ಕತ್ತರಿಸಿದ ರೀತಿಯಲ್ಲಿ ಗಾಯಗಳು ಆಗಿರುವುದರಿಂದ ಪೊಲೀಸರೀಗ ಹೊಸ ಕಾರ್ಯಾಚರಣೆಗೆ ಇಳಿದಿದ್ದಾರೆ.
ನಗರದ ಬಹುತೇಕ ಅಂಗಡಿಯಲ್ಲಿ ಮಾರಾಟ ಮಾಡುವ ಈ ಮಾಂಝಾ ದಾರವನ್ನ ಪತ್ತೆ ಹಚ್ಚುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ದಾರವನ್ನ ಮಾರಾಟ ಮಾಡಬಾರದೆಂದು ಪೊಲೀಸ್ ಆಯುಕ್ತರು ಪ್ರಕಟಣೆಯನ್ನೂ ಹೊರಡಿಸಿ, ಗಾಳಿಪಟ ಹಾರಿಸುವವರಿಗೆ ಎಚ್ಚರಿಕೆ ನೀಡಿದ್ದಾರೆ.
ಮಾಂಝಾ ದಾರಕ್ಕೆ ಮಾಂಜಾ ನೀಡಲು ಮುಂದಾಗಿರುವ ಪೊಲೀಸರು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.