ಆಕೆ ಕಳೆದುಕೊಂಡ ಬ್ಯಾಗ್ ಮರಳಿಸಿದ್ದು ಪೊಲೀಸರು: ಬ್ಯಾಗಲ್ಲಿ ಏನೇನಿತ್ತು ಗೊತ್ತಾ..
ಬೆಂಗಳೂರು: ತಲೆಗೆ ಹೆಲ್ಮೇಟ್ ಧರಿಸಿಕೊಂಡು ಸಂಚರಿಸುತ್ತಿದ್ದ ಯುವತಿಯೋರ್ವಳು ತನ್ನದೇ ಬ್ಯಾಗ್ ಬಿದ್ದರೂ ಲಕ್ಷ್ಯ ವಹಿಸದೇ ಮನೆಗೆ ಹೋಗಿದ್ದಳು. ಆದ್ರೆ, ಆ ಬ್ಯಾಗ್ ಯಾರದ್ದೋ ಕೈಗಳಿಗೆ ಸಿಗದೇ ಪೊಲೀಸರಿಗೆ ಸಿಕ್ಕ ಪರಿಣಾಮ, ಆಕೆಗೆ ಆ ಬ್ಯಾಗ್ ಮರಳಿ ಲಭಿಸಿದೆ.
ಅಶೋಕ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಡಿಸೋಜ ವೃತ್ತದ ಬಳಿ ದ್ವಿಚಕ್ರ ಸವಾರರೊಬ್ಬರು ಬ್ಯಾಗ್ ನ್ನು ಬೀಳಿಸಿಕೊಂಡು ಹೋಗಿದ್ದರು, ಅಲ್ಲಿಯೇ ಕರ್ತವ್ಯದಲ್ಲಿದ್ದ ASI ವೆಂಕಟೇಶ್ ಮತ್ತು ಹೆಡ್ ಕಾನ್ಸ್ ಟೇಬಲ್ ರಾಜು ಚವ್ಹಾಣ್ ಆ ಬ್ಯಾಗನ್ನ ಗಮನಿಸಿ, ಪರಿಶೀಲಿಸಿದ್ರು.
ಬ್ಯಾಗಲ್ಲಿದ್ದ 8000 ರೂಪಾಯಿ, ಮೊಬೈಲ್ ಫೋನ್, ATM card ಎಲ್ಲವನ್ನೂ ಸಂಬಂಧಿಸಿದವರಿಗೆ ಮರಳಿಸಿ ಆದರ್ಶ ಮೆರೆದಿದ್ದಾರೆ.
ದ್ವಿಚಕ್ರವಾಹನ ಚಲಿಸುವಾಗ ಬ್ಯಾಗ್ ಗಳ ಬಗ್ಗೆ ಜಾಗೃತೆ ವಹಿಸುವ ಅಗತ್ಯತೆಯಿದ್ದು, ಇಂತಹ ಪೊಲೀಸರಿಗೂ ನಾವೆಲ್ಲರೂ ಸ್ಮರಿಸುವ ಅಗತ್ಯತೆಯೂ ಇದೆ.