ಹಮಾಲಿ ಕಾರ್ಮಿಕರ ಮುಷ್ಕರ: ಪದ್ಮಶ್ರೀ ದೇವಿ ಸಾಥ್- ಮಹೇಶ ಪತ್ತಾರ ಚಾಲನೆ
ಎಪಿಎಂಸಿ ಹಮಾಲಿ ಕಾರ್ಮಿಕರ ಮುಷ್ಕರ ಪ್ರಾರಂಭ
ವಸತಿ ಯೋಜನೆ ಜಾರಿಗೆ ಒತ್ತಾಯ
ಒಂದು ಲಕ್ಷ ಹಮಾಲಿ ಕಾರ್ಮಿಕರ ಉದ್ಯೋಗ ಕಸಿಯಲಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ವಾಪಸ್ಸಗೆ ಒತ್ತಾಯ
ಹುಬ್ಬಳ್ಳಿ: ಎಪಿಎಂಸಿ ಹಮಾಲಿ ಕಾರ್ಮಿಕರು ಮಾರುಕಟ್ಟೆಯಲ್ಲಿ ಹಮಾಲಿ ಕೆಲಸ ಸ್ಥಗಿತಗೊಳಿಸಿ ಮುಷ್ಕರ ಕೈಗೊಂಡರು. ಅಂಬೇಡ್ಕರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಮುಖಾಂತರ ಬಂದ ಕಾರ್ಮಿಕರು ಎಪಿಎಂಸಿ ಆಡಳಿತ ಕಚೇರಿ ಎದುರು ಧರಣಿ ಕುಳಿತರು.
ಧರಣಿಗೆ ರಾಜ್ಯ ಹಮಾಲಿ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಚಾಲನೆ ನೀಡಿದರು.
ಬೆಂಬಲ ನೀಡಿ ಮಾತನಾಡಿದವರು
ಖ್ಯಾತ ಭಾಷಾತಜ್ಞ ಪದ್ಮಶ್ರೀ ಡಾ. ಜಿ.ಎನ್.ದೇವಿ, ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ, ಸಂವಿಧಾನ ಸುರಕ್ಷಾ ಸಮಿತಿ ಸಂಚಾಲಕ ಅಶ್ರಫ್ ಅಲಿ ಬಿ., ಕರವೇ ಜಿಲ್ಲಾಅಧ್ಯಕ್ಷ ಅಮೃತ ಇಜಾರಿ, ಯುವ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಏಕಲಾಸಪೂರ, ಎಪಿಎಂಸಿ ಸದಸ್ಯ ಚನ್ನು ಹೋಸಮನಿ, ಮಾಜಿ ಎಪಿಎಂಸಿ ಅಧ್ಯಕ್ಷ ರಾಮಚಂದ್ರ ಜಾಧವ, ಜೈಭೀಮ ಸೇನೆ ಮುಖಂಡರಾದ ಹನುಮಂತ ಸೋಮಪಲ್ಲಿ, ಮಹದಾಯಿ ಹೋರಾಟಗಾರ ಶಿವಣ್ಣ ಹುಬ್ಬಳ್ಳಿ ವೀರಣ್ಣ ನೀರಲಗಿ, ಡಿ.ಜಿ.ಜಂತ್ಲಿ, ವಕೀಲರ ಸಂಘದ ಕೆ.ಎಚ್.ಪಾಟೀಲ, ವಿಮಾ ನೌಕರರ ಸಂಘದ ಎ.ಎಂ.ಖಾನ, ಕರ್ನಾಟಕ ಭೀಮ ಸೇನೆ ಸಮಿತಿ ರಾಜ್ಯಾಧ್ಯಕ್ಷ ಬಿ.ಡಿ.ಮಾದರ, ಸಮಾಜಿಕ ಕಾರ್ಯಕರ್ತ ಎಸ್. ಎಮ್. ಬುಡನಖಾನ ಮುಂತಾದವರು ಬೆಂಬಲಿಸಿ ಮಾತನಾಡಿದರು.
ನೇತೃತ್ವ
ಗುರುಸಿದ್ದಪ್ಪ ಅಂಬೀಗೇರ, ಬಸವಣ್ಣೇಪ್ಪ ನೀರಲಗಿ, ಕರಿಯಪ್ಪ ದಳವಾಯಿ, ಹುಸೇನಸಾಬ ನದಾಫ್, ಕತಾಲಸಾಬ ಮುಲ್ಲಾ, ಮಂಜುನಾಥ ಹುಜರಾತಿ, ಮಹ್ಮದ ರಫೀಕ್ ಮುಳಗುಂದ, ಕರಿಯಪ್ಪ ಗಿರಿಸಾಗರ, ಲಕ್ಷ್ಮವ್ವ ಹೊಸೂರಿ, ಪ್ರೇಮಾ ಅಣ್ಣಿಗೇರಿ, ಕಾಕಪ್ಪ ಜಾಲಗಾರ, ನಾಗರಾಜ ಮುಪ್ಪಣ್ಣವರ, ಹನಮಂತ ಅಂಬಿಗೇರ, ಗಾಳೆಪ್ಪ ಮುತ್ಯಾಳ , ನೂರಾಹ್ಮದ ಕಲಾದಗಿ ಮುಂತಾದವರು.
ಮನವಿ
ಎಪಿಎಂಸಿ ಸಹ ಕಾರ್ಯದರ್ಶಿ ಬಿ.ಎಸ್.ಮರೀಕಟ್ಟಿ ಅವರ ಮುಖಾಂತರ ಸಹಕಾರ ಸಚಿವರಿಗೆ ಮನವಿ ನೀಡಲಾಯಿತು. ನಾಳೆಯೂ ಮುಷ್ಜರ ಮುಂದುವರೆಯಲಿದೆ. ನಾಳೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗುವುದು.