Exclusive Video- ಹೌದು.. ನಾನೇ ಕೊಲೆ ಮಾಡಿಸಿದ್ದು ಅಂದ್ನಾ… ಬಚ್ಚಾಖಾನ್ ಒಪ್ಪಿಕೊಂಡಿದ್ದು ಏನೇನು ಗೊತ್ತಾ..?
ಹುಬ್ಬಳ್ಳಿ: ಆಗಸ್ಟ್ ಮೊದಲ ವಾರದಲ್ಲಿ ಹುಬ್ಬಳ್ಳಿಯ ಜನನಿಬೀಡ ಪ್ರದೇಶದಲ್ಲಿಯೇ ಗುಂಡು ಹಾರಿಸಿ ಕೊಲೆ ಮಾಡಿಸಿದ್ದು ನಾನೇ ಎಂದು ಬಾಂಬೆ ಮೂಲದ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಸಯ್ಯದ ಸುಲೇಮಾನ ಬಚ್ಚಾಖಾನ ಖಾದ್ರಿ ಹೇಳಿಕೊಂಡಿದ್ದಾನೆಂದು ತಿಳಿದು ಬಂದಿದೆ.
ಇರ್ಪಾನ್ ಹಂಚಿನಾಳ ಅಲಿಯಾಸ್ ಪ್ರೂಟ್ ಇರ್ಫಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಐದು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ಬಚ್ಚಾಖಾನ, ಪ್ರೂಟ್ ಇರ್ಫಾನ್ ಜೊತೆಗಿನ ವಿರಸವನ್ನ ಎಳೆ ಎಳೆಯಾಗಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆಂದು ಹೇಳಲಾಗಿದೆ.
ಧಾರವಾಡದ ಸಮೀಪದ ಖಾನಕಾ ಜಾಗಕ್ಕೆ ಸಂಬಂಧಿಸಿದಂತೆ ಹಣಕಾಸಿನ ಮಾತುಕತೆ ನಡೆದಿತ್ತು. ಮತ್ತೂ ಅದೇ ಕಾರಣಕ್ಕಾಗಿ ಹಲವು ಬಾರಿ ಮಾತಿಗೆ ಮಾತು ಬೆಳೆದಿತ್ತು ಎಂಬುದನ್ನೂ ಬಚ್ಚಾಖಾನ ಹೇಳಿಕೊಂಡಿದ್ದಾನೆಂದು ತಿಳಿದು ಬಂದಿದೆ.
ಧಾರವಾಡ ಜೈಲಿನಲ್ಲಿದ್ದಾಗ ಪರಿಚಯವಾಗಿ ಪ್ರೂಟ್ ಇರ್ಫಾನ್ ಮೊದ ಮೊದಲು ಸರಿಯಾಗಿಯೇ ಇದ್ದ. ಆದರೆ, ಆತನಿಂದ ಸಮಾಜಕ್ಕೆ ಬಹಳ ಅನ್ಯಾಯವಾಗುತ್ತಿದೆ ಎಂದು ಹೀಗೆ ಮಾಡಿದನೆಂದು ಹೇಳಿಕೊಂಡಿದ್ದಾನೆಂದು ತಿಳಿದು ಬಂದಿದೆ.
ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಿದ್ದು, ಹಾಲಿಯಿರುವ ಮೈಸೂರು ಕಾರಾಗೃಹಕ್ಕೆ ಪೊಲೀಸರು ರವಾನೆ ಮಾಡಲಿದ್ದಾರೆ. ವಾಣಿಜ್ಯನಗರಿಯಲ್ಲಿ ನಡೆದ ಇರ್ಫಾನ್ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನ ಬಂಧನ ಮಾಡಲಾಗಿದೆ.
ಕೊಲೆಗೆ ಸಾಥ್ ನೀಡಿದವರನ್ನ, ಮೊಬೈಲ್ ಒದಗಿಸಿದವರನ್ನ ಕೊನೆಗೆ ಶೂಟ್ ಮಾಡಿದವರನ್ನೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಹಳೇಹುಬ್ಬಳ್ಳಿ ಠಾಣೆಯ ಶಿವಾನಂದ ಕಮತಗಿ, ಅಶೋಕನಗರ ಠಾಣೆ ಇನ್ಸಪೆಕ್ಟರ್ ರವಿಚಂದ್ರ ಹಾಗೂ ಸಿಸಿಬಿಯ ಅಲ್ತಾಪ ಮುಲ್ಲಾ ಅತ್ಯುತ್ತಮ ಕಾರ್ಯವನ್ನ ಮಾಡಿದ್ದು, ಈ ಹತ್ಯೆಯ ಮೂಲವನ್ನೂ ಪತ್ತೆ ಹಚ್ಚಿರುವುದು ಶ್ಲಾಘನೀಯ.