ನಿಷ್ಠಾವಂತ ಬಿಇಓ ನಂಜುಡಯ್ಯ ವರ್ಗಾವಣೆ: ಅಧಿಕಾರಿಯ ಸ್ಮರಿಸಿದ ಶಿಕ್ಷಕ ಸಮೂಹ
ಗದಗ: ಜಿಲ್ಲೆಯ ರೋಣ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನಂಜುಡಯ್ಯನವರ ವರ್ಗಾವಣೆಯಾಗಿದ್ದು, ಇಂದು ಅವರಿಗೆ ಆತ್ಮೀಯವಾಗಿ ಬೀಳ್ಕೋಡಲಾಯಿತು.
ರೋಣ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ನಂತರ ಅವಿರತವಾಗಿ ಶೈಕ್ಷಣಿಕ ಪ್ರಮಾಣವನ್ನ ಹೆಚ್ಚಿಸಲು ನಂಜುಡಯ್ಯ ಪ್ರಯತ್ನಿಸಿದ್ದರು. ಎಲ್ಲರೊಂದಿಗೂ ಒಳ್ಳೆಯ ಬಾಂಧವ್ಯ ಬೆಳೆಸಿಕೊಂಡು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನ ಆಯೋಜನೆ ಮಾಡಿದ್ದನ್ನ ಶಿಕ್ಷಕ ಸಮೂಹ ಸ್ಮರಿಸಿದೆ.
ವರ್ಗಾವಣೆಗೊಂಡು ರೋಣದಿಂದ ಹೊರಟಿರುವ ಅಧಿಕಾರಿಗೆ ಆತ್ಮೀಯವಾಗಿ ಬೀಳ್ಕೋಡಲಾಯಿತು.
ಉತ್ತಮ ಶೈಕ್ಷಣಿಕ ತಾಲೂಕಿಗಾಗಿ ಶ್ರಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ನಂಜುಡಯ್ಯ, ದಕ್ಷ ಹಾಗೂ ಪ್ರಾಮಾಣಿಕರಾಗಿದ್ದರೆಂಬುದನ್ನ ಪ್ರತಿಯೊಬ್ಬರು ಹೇಳುತ್ತಿರುವುದು, ನಂಜುಡಯ್ಯನವರ ಕಾರ್ಯ ಹೇಗಿತ್ತು ಎಂಬುದನ್ನ ಬಿಂಬಿಸುತ್ತಿತ್ತು.
ಈ ಸಮಯದಲ್ಲಿ ರೋಣದ ಕ್ಷೇತ್ರ ಸಮನ್ವಾಧಿಕರಿ ಎಲ್.ಕೆ.ಗಡಗಿ, ಬಸವರಾಜ ಅಂಗಡಿ, ಆರ್.ಎಫ್.ಸೋಮನಕಟ್ಟಿ, ಜಿ.ಎಸ್.ವಡ್ಡರ, ಉರ್ದು ಸಿಆರ್ ಪಿ ಎ.ಬಿ.ವಣಗೇರಿ, ಬಿ.ಎನ್.ಬಾಳಗೊಂಡ, ಪಿ.ಎನ್.ಜೋಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.