Exclusive-ಸುರೇಶ ಅಂಗಡಿ ನಿಧನ: ನಿನ್ನೆಯಿಂದಲೂ ಅಗಳನ್ನ ಮುಟ್ಟದ ‘ಬ್ರೋನೊ’
ಬೆಳಗಾವಿ: ಆ ಮನೆಯ ಮಾಲೀಕ ಮತ್ತೆ ಆ ಮನೆಯಲ್ಲಿ ಕಾಲಿಡಲ್ಲ ಎಂದು ಅದೇಗೇ ಈ ಮೂಖ ಪ್ರಾಣಿಗೆ ತಿಳಿದಿದೆಯೋ ಗೊತ್ತಿಲ್ಲ. ನಿನ್ನೆಯಿಂದಲೂ ನಿಯತ್ತಿನ ಪ್ರಾಣಿ ಒಂದೇ ಒಂದು ಅಗಳು ಅನ್ನವನ್ನೂ ತಿನ್ನದೇ ಕಣ್ಣೀರಾಗಿದೆ. ಮಾಲೀಕನ ಬರುವಿಕೆಯಿಲ್ಲವೆಂದು..
ಹೌದು.. ಸಚಿವ ಸುರೇಶ ಅಂಗಡಿಯವರ ಸಾವು ಬೆಳಗಾವಿಯ ಅವರ ಮನೆಯಲ್ಲಿರುವ ‘ಬ್ರೋನೊ’ ಎಂದು ಕರೆಯುತ್ತಿದ್ದ ಶ್ವಾನ, ಮುಂದೆ ಇಟ್ಟಿರುವ ಹಾಲು ಅನ್ನವನ್ನ ಮುಟ್ಟಿಯೇ ಇಲ್ಲ. ಎಂತಹ ಮನಸ್ಸಿರಬಹುದು ನೋಡಿ ಇದರದ್ದು.
ಮನೆಯಲ್ಲಿದ್ದಾಗ ಸುರೇಶ ಅಂಗಡಿ, ಬ್ರೋನೊದ ಜೊತೆ ಆಗಾಗ ಸಮಯ ಕಳೆಯುತ್ತಿದ್ದರು. ಅದಕ್ಕೆ ಇಷ್ಟವಾದ ತಿಂಡಿಯನ್ನ ನೀಡುತ್ತಿದ್ದರು. ಆದರೆ, ಹೋದ ಮಾಲೀಕ ಮನೆಗೆ ಮತ್ತೆ ಬರಲಾರ ಎಂಬುದನ್ನ ಅರಿತಂತೆ ಕಾಣುತ್ತಿರುವ ಬ್ರೋನೊ, ಏನೂ ತಿನ್ನದೇ ಇರುವುದು ಸೋಜಿಗ ಮೂಡಿಸಿದೆ.
ಕೇಂದ್ರ ಸಚಿವ ಸುರೇಶ ಅಂಗಡಿಯವರ ಅಂತ್ಯ ಸಂಸ್ಕಾರ ನವದೆಹಲಿಯಲ್ಲೇ ನಾಲ್ಕು ಗಂಟೆಗೆ ನಡೆಯಲಿದೆ. ಈ ಮನೆಗೆ ಅವರು ಯಾವತ್ತೂ ಮರಳಿ ಬರಲ್ಲ. ಈ ಬ್ರೋನೊ ಗೆ ತಿಳಿ ಹೇಳುವವರೂ ಯಾರೂ.. ವಿಧಿಯಾಟ ಬಲ್ಲವರಾರು..!