ದರ್ಗಾ ಜೈಲಿಗೆ ’70’ ಪೊಲೀಸರ ದಾಳಿ: ಏನೇನು ಸಿಕ್ಕಿದೆ ಗೊತ್ತಾ..?
ವಿಜಯಪುರ: ಐತಿಹಾಸಿಕ ಗುಮ್ಮಟನಗರಿ ಜಿಲ್ಲೆಯಲ್ಲಿ ಗಾಂಜಾ ಗಮ್ಮತ್ತು ಜೋರಾಗಿರುವ ಮಧ್ಯದಲ್ಲೇ ವಿಜಯಪುರ ಕೇಂದ್ರ ಕಾರಾಗೃಹದ ಮೇಲೆ ಜಿಲ್ಲಾ ಪೊಲೀಸರ ದಾಳಿ ನಡೆಸಿದ್ದಾರೆ.
ಇನ್ನು ದಾಳಿ ವೇಳೆ ದರ್ಗಾ ಜೈಲಿನಲ್ಲಿ ಮೂರು ಮೊಬೈಲ್, ಚಾರ್ಜರ್, ಏರ್‌ಪೋನ್, ಎಕ್ಸ್‌ಟ್ರಾ ಸೀಮ್, ತಂಬಾಕು, ಬೀಡಿ ಕಟ್‌ಗಳು ಪತ್ತೆಯಾಗಿವೆ. ಕಾನೂನು ಬಾಹಿರವಾಗಿ ಜೈಲಿನಲ್ಲಿ ಮೊಬೈಲ್, ಬೀಡಿ ತಂಬಾಕು ಇಟ್ಟುಕೊಂಡಿದ್ದ ಖೈದಿಗಳು ಖಚಿತ ಮಾಹಿತಿ ಮೇರೆಗೆ ವಿಜಯಪುರ ಎಎಸ್ಪಿ ರಾಮ ಅರಸಿದ್ಧಿ ನೇತೃತ್ವದಲ್ಲಿ ದರ್ಗಾ ಜೈಲ್ ಮೇಲೆ ರೇಡ್ ಮಾಡಲಾಗಿದೆ.
ಇನ್ನು ಪತ್ತೆಯಾಗಿರುವ ಮೊಬೈಲ್ ನಲ್ಲಿ ಖೈದಿಗಳು ಯಾರ ಜೊತೆಗೆ ಮಾತನಾಡುತ್ತಿದ್ದರು ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್ ಮಾತನಾಡಿ, 60 ಸಿಬ್ಬಂದಿಗಳ ಜೊತೆಗೆ 7 ಇನ್ಸಪೆಕ್ಟರ್, ಡಿವೈಎಸ್ಪಿ ಮತ್ತು ಆಡಿಷನಲ್ ಎಸ್ಪಿ ದಾಳಿ ಮಾಡಿದ್ದರು. ಇದರ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.