ಕಾನೂನು ಗಾಳಿ ತೂರಿ ಕೌನ್ಸಲಿಂಗ್: ಡಿಡಿಪಿಐ ಹಂಚಾಟೆಯವರೇ ಉತ್ತರಿಸ್ತೀರಾ..!
ಧಾರವಾಡ: ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಶಿಕ್ಷಣ ಇಲಾಖೆಯ ಕಾನೂನನ್ನ ಗಾಳಿಗೆ ತೂರಿ ಕೌನ್ಸಿಲಿಂಗ್ ನಡೆಸುವ ಜೊತೆಗೆ ಉರ್ದು ಶಾಲೆಯನ್ನ ಕಡೆಗಣನೆ ಮಾಡುತ್ತಿದ್ದಾರೆಂಬ ದೂರುಗಳು ಕೇಳಿ ಬಂದಿವೆ.
ಧಾರವಾಡದ ಡಿಡಿಪಿಐ ಮೋಹನಕುಮಾರ ಹಂಚಾಟೆ, ಕೆಲವರ ಸಂಬಂಧವಾಗಿ ಪದೇ ಪದೇ ಕೌನ್ಸಿಲಿಂಗ್ ಮಾಡುತ್ತಿದ್ದು, ವಲಯವಾರು ಹಂಚಿಕೆಯಲ್ಲೂ ಅನ್ಯಾಯ ಮಾಡುತ್ತಿದ್ದಾರೆ. ಕೆಲವರ ಹಿತಾಸಕ್ತಿಯನ್ನ ಕಾಪಾಡಲು ಮುಂದಾಗಿರುವುದು ಗೊತ್ತಾಗುತ್ತಿದೆ ಎಂದು ಹೇಳಲಾಗಿದೆ.
ಡಿಡಿಪಿಐ ಮೋಹನಕುಮಾರ ಹಂಚಾಟೆಯವರೇ ಇವಿಷ್ಟು ಪ್ರಶ್ನೆಗಳಿಗೆ ಉತ್ತರಿಸುವಿರಾ..?
# 02.09.2020 ರಂದು ಕೌನ್ಸಿಲಿಂಗ್ ಮತ್ತೆ ಇಂದು ಸಹ ಶಿಕ್ಷಕರಿಂದ ಮುಖ್ಯಗುರುಗಳ ಕೌನ್ಸಿಲಿಂಗ್ ಏಕೆ..?
# ಅಂದು ರಾತ್ರಿ 12.30 ರಿಂದ 1 ಗಂಟೆಯವರೆಗೆ ನಡೆದ ಕೌನ್ಸಿಲಿಂಗ್ ಏನಾಯಿತು..?
# ಇಂದು ನಡೆಯುತ್ತಿರುವ ಕೌನ್ಸಿಲಿಂಗ್ ಗೆ ಖಾಲಿ ಹುದ್ದೆಗಳ ಪಟ್ಟಿ ಬಿಡುಗಡೆ ಮಾಡದೇ ಇರುವುದು ಏಕೆ..?
# ಈ ಮೊದಲು ಎಬಿಸಿ ವಲಯ ವರ್ಗಾವಣೆ ಮತ್ತೆ ಮರಳಿ ಮಾಡಿದ್ದೇಕೆ..? ಮರಳಿ ಮಾಡುವಾಗ ಬಿ.ಸಿ ವಲಯಕ್ಕೆ ಮಾತ್ರ ವರ್ಗಾವಣೆ ಮಾಡಿ ಎ ವಲಯಕ್ಕೆ ಏಕೆ ವರ್ಗಾವಣೆ ಮಾಡಲಿಲ್ಲ. ಶಹರದ ಸಮೀಪವಿರುವ ನವಲೂರ ಶಾಲೆಯ ಪ್ರಧಾನ ಗುರುಗಳ ಹುದ್ದೆ ಖಾಲಿ ಉಳಿದಿದ್ದು ಏಕೆ..?
# ಇತಿಹಾಸ ಎಂಬಂತೆ ಧಾರವಾಡ ಜಿಲ್ಲೆಯಲ್ಲಿ ಈ ವರ್ಷ ಮಾತ್ರ ಎರಡೆರಡು ಬಾರಿ ಕೌನ್ಸಿಲಿಂಗ್ ಏಕೆ..?
# ವಲಯ ವರ್ಗಾವಣೆಯಲ್ಲಿ ಇನ್ನೂ ಒಂದು ವರ್ಷ ಸಹ ಸಿ ವಲಯದಲ್ಲಿ ಮಾಡದವರು ಬಿ ವಲಯಕ್ಕೆ ಬಂದಿದ್ದು ಹೇಗೆ..? ( ಉದಾಹರಣೆ- ವಾಲಿ ಟೀಚರ್ ಉಪ್ಪಿನಬೆಟಗೇರಿಯಿಂದ ಯರಿಕೊಪ್ಪಕ್ಕೆ ಬಂದಿರುವುದು)
# ಸಹ ಶಿಕ್ಷಕ ಹುದ್ದೆಯಿಂದ ಮುಖ್ಯ ಶಿಕ್ಷಕರ ಹುದ್ದೆಗೆ ಸಿ ವಲಯಕ್ಕೆ ಹಾಜರಾಗಿ ಒಂದು ವರ್ಷದೊಳಗೆ ಬಿ ವಲಯವೂ ಇಲ್ಲಾ ಎ ವಲಯವೂ ಇಲ್ಲಾ ಒಮ್ಮಿಂದೊಮ್ಮೆಲೆ ಎಂಪಿಎಸ್ ಗೆ ಪ್ರಧಾನ ಗುರುಗಳು ಆಗಬಹುದೇ ( ಉದಾಹರಣೆ- ಅಮ್ಮಿನಬಾವಿ ಟೀಚರ್). ಒಂದು ಹುದ್ದೆಯಲ್ಲಿ ಕನಿಷ್ಠ ಮೂರು ವರ್ಷ ಇರಬೇಕು ಎನ್ನುವ ನಿಯಮ ಅನ್ವಯವಾಗುವುದಿಲ್ಲವೇ..?
# ಇವತ್ತು ನಡೆಯುತ್ತಿರುವ ಸಹಶಿಕ್ಷಕರಿಂದ ಮುಖ್ಯ ಗುರುಗಳ ಹುದ್ದೆ ಕೌನ್ಸಿಲಿಂಗ್ ಗೆ ಶಿಕ್ಷಕರಿಗೆ ಮಾಹಿತಿ, ಆಕ್ಷೇಪಣೆಗೆ ಅವಕಾಶಯಿಲ್ಲ. ಖಾಲಿ ಹುದ್ದೆಯ ಪಟ್ಟಿಯಿಲ್ಲ.
# ಸರಕಾರದ ಆದೇಶದಂತೆ ಈಗಾಗಲೇ ಕೌನ್ಸಿಲಿಂಗ್ ಮುಗಿಯಬೇಕಾಗಿತ್ತು. ಇದು ನಿಮಗೆ ತಿಳಿದಿಲ್ಲವೇ..?
# ಉರ್ದು ಶಿಕ್ಷಕರ ಕೌನ್ಸಿಲಿಂಗ್ ಮಾಡದಿರುವುದಕ್ಕೆ ಕಾರಣವೇನು.. ?
# ಇಂದು ಮಾಡುತ್ತಿರುವ ಹಿಂದಿ ಶಿಕ್ಷಕರ ಬಡ್ತಿಯು ಸರಿಯಾದ ಕ್ರಮದಲ್ಲಿ ನಡೆಯುತ್ತಿಲ್ಲ. ಆಕ್ಷೇಪಣೆಗೆ ಅವಕಾಶ ನೀಡದೇ ಇರುವುದು ಏಕೆ..
ಉತ್ತರ ಕೊಡ್ತೀರಾ ಡಿಡಿಪಿಐ ಮೋಹನಕುಮಾರ ಹಂಚಾಟೆಯವರೇ..