ಕಿಮ್ಸನ ‘ಲಕ್ಷ ಬಾವಲಿ’ಗಳು ಸಂಜೆಯಾದ್ರೇ ಎಲ್ಲಿಗೆ ಹೋಗ್ತವೆ ಗೊತ್ತಾ..!
ಹುಬ್ಬಳ್ಳಿ: ನೀವೂ ಉತ್ತರಕರ್ನಾಟಕದ ಪ್ರತಿಷ್ಟಿತ ಕಿಮ್ಸ್ ಆಸ್ಪತ್ರೆಗೆ ಎಂದಾದರೂ ಹೋಗಿದ್ದೀರಾ.. ಹಾಗಾದ್ರೇ ನೀವೂ ಈ ಬಾವಲಿಗಳ ಶಬ್ದವನ್ನ ಕೇಳಿಯೇ ಇರ್ತೀರಿ. ಪ್ರತಿ ಗಿಡದಲ್ಲೂ ಸಾವಿರಾರೂ ಬಾವಲಿಗಳು, ಜೀವನಕ್ಕಾಗಿ ಜೋತು ಬಿದ್ದಿರುತ್ತವೆ. ಆದರೆ, ಅವೆಲ್ಲವೂ ದಿನನಿತ್ಯ ಗೋಕುಲ ರಸ್ತೆಯ ಮೂಲಕ ಹೋಗುವುದೆಲ್ಲಿ ಗೊತ್ತಾ.. ಪೂರ್ಣವಾಗಿ ಓದಿ ಮಾಹಿತಿ ಪಡೆಯಿರಿ..
ಹೀಗೆ ಸಾಲು ಸಾಲು ಹೋಗುತ್ತಿರುವ ಲಕ್ಷಾಂತರ ಬಾವಲಿಗಳು ಹೊರಟಿರುವುದು ತಾರಿಹಾಳ ಹೊರವಲಯದತ್ತ. ಇಳಿಸಂಜೆ ಹೊರಡುವ ಸೈನ್ಯ ತಡರಾತ್ರಿ ಮೂರು ಘಂಟೆಗೆ ಮರಳಿ ಕಿಮ್ಸ್ ನತ್ತ ಬರುತ್ತವೆ.
ಹಾಗೇ ನೋಡಿದ್ರೇ, ಇವುಗಳಿಗೆ ಆಹಾರ ಸಿಗುವುದು ರಾತ್ರಿಯಲ್ಲೇ. ಹಾಗಾಗಿಯೇ ತಾರಿಹಾಳದ ಹೊರವಲಯವನ್ನ ಆರಿಸಿಕೊಂಡಿವೆ. ದಿನವೂ ಸಂಜೆ ಸಾಲಾಗಿ ಹೋಗುವುದನ್ನ ನೋಡಿದವರು ಅಚ್ಚರಿಯಿಂದ ಈ ವಿಷಯವನ್ನ ಹೇಳ್ತಾರೆ.
ಕಿಮ್ಸ್ ನ ಬಾವಲಿಗಳ ಜೀವನ ವೃತ್ತಾಂತ ಹೊಸತನದಿಂದಲೇ ಕೂಡಿದೆ. ನೀವೂ ಕಿಮ್ಸ್ ಹಿಂಬಾಗ ಬಂದ್ರೇ ಸದಾಕಾಲ ಮರದಲ್ಲಿ ನೇತಾಡುವ ಇವುಗಳು, ಸಂಜೆ ಆದ ತಕ್ಷಣವೇ ಹೊರುಡುವುದು ಅಚ್ಚರಿಯ ಸಂಗತಿಯೇ ಸರಿ.