ಶಾಸಕ ದೇಸಾಯಿ ಜೊತೆಗೆ ಮುತ್ತಣ್ಣನವರ “ಆ” ಸಚಿವರನ್ನ ರಾತ್ರೋರಾತ್ರಿ ಭೇಟಿಯಾಗಿದ್ದೇಕೆ…?
ಬೆಂಗಳೂರು: ಭಾರತೀಯ ಜನತಾ ಪಕ್ಷದಿಂದ ಉಚ್ಚಾಟನೆಗೊಂಡಿರುವ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣನವರ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಜೊತೆಗೂಡಿ “ಆ” ಸಚಿವರನ್ನ ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ.
ಭಾರತೀಯ ಜನತಾ ಪಕ್ಷದ ಪ್ರಮುಖರ ಬಗ್ಗೆ ಹೇಳಿಕೆ ನೀಡಿದ ನಂತರ ಪಕ್ಷದಿಂದ ಶಿವಾನಂದ ಮುತ್ತಣ್ಣನವರ, ಬಿಜೆಪಿಯಿಂದ ವಜಾಗೊಂಡಿದ್ದಾರೆ. ಆದ್ರೇ, ಪಕ್ಷದ ಪ್ರಮುಖರೊಂದಿಗಿನ ಅವರ ಒಡನಾಟ ಹಾಗೇಯೇ ಇದ್ದು, ಅದೇ ಕಾರಣಕ್ಕೆ ಶಾಸಕ ಅಮೃತ ದೇಸಾಯಿಯವರ ಜೊತೆ ಸಚಿವ ಕೆ.ಎಸ್.ಈಶ್ವರಪ್ಪರನ್ನ ಭೇಟಿಯಾಗಿದ್ದಾರೆ.
ಈ ಭೇಟಿಯ ಹಿಂದೆಯೂ ಪ್ರಮುಖ ಉದ್ದೇಶವಿದೆ. ಅದೆನೇಂದರೇ, ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ವೀರ ಸಂಗೋಳ್ಳಿ ರಾಯಣ್ಣ ಹೆಸರಿಡುವಂತೆ ಕೋರಲಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವೀರ ಸಂಗೊಳ್ಳಿ ರಾಯಣ್ಣ ಅಂತಲೂ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಕಿತ್ತೂರು ಚೆನ್ನಮ್ಮನ ಹೆಸರಿಡುವಂತೆ ಶಾಸಕ ಅಮೃತ ದೇಸಾಯಿ ನೀಡಿರುವ ಮನವಿಯನ್ನ, ಸಚಿವ ಈಶ್ವರಪ್ಪನವರಿಗೆ ನೀಡಲಾಗಿದೆ.
ಕೆಎಂಎಫ್ ನಿರ್ದೇಶಕ ಶಂಕರ ಮುಗದ, ಶಿವಳ್ಳಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಶಿವು ಬೆಳಾರದ ಈ ಸಮಯದಲ್ಲಿ ಉಪಸ್ಥಿತರಿದ್ದರು.