ಹೋರಾಟದಲ್ಲಿ “ಮಲಗಿದ್ದ ನೀರಲಕೇರಿ”: ಎತ್ತಾಕ್ಕಿಕೊಂಡೋದ್ ಪೊಲೀಸ್ರು- ರಾಯಪೂರದ ಬಳಿ ನಡೆದಿದ್ದಾದರೂ ಏನು…?
ಧಾರವಾಡ: ಕೇಂದ್ರ ಸರಕಾರದ ರೈತ ವಿರೋಧಿ ನೀತಿಯನ್ನ ಖಂಡಿಸಿ ರಾಯಪೂರದ ಬಳಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ, ಪ್ರತಿಭಟನೆ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ತಂದಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಹಲವೂ ಕಾರ್ಯಕರ್ತರು ಭಾಗವಹಿಸಿದ್ದರು. ಹೋರಾಟದ ನೇತೃತ್ವ ವಹಿಸಿದ್ದ ಪಿ.ಎಚ್.ನೀರಲಕೇರಿ ರಸ್ತೆಯಲ್ಲೇ ಮಲಗಿಕೊಂಡು ಆಕ್ರೋಶವ್ಯಕ್ತಪಡಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದರಿಂದ ಹುಬ್ಬಳ್ಳಿ ಧಾರವಾಡ ಮಧ್ಯ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ರಾಯಾಪುರ ಬಳಿ ಹೋರಾಟ ನಡೆದಿದ್ದರಿಂದ ಬಹುತೇಕ ಸವಾರರು ಅನ್ಯ ಮಾರ್ಗ ಹುಡುಕಿಕೊಂಡು ಅಲೆದಾಡುವಂತಾಯಿತು.
ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎಸಿಪಿ ಅನುಷಾ, ಪ್ರತಿಭಟನಾನಿರತರನ್ನ ಬಂಧಿಸಿದ್ರು.
ಹೋರಾಟ ಬಂಧನದಿಂದ ಅಂತ್ಯಗೊಂಡಿದ್ದರಿಂದ ರಸ್ತೆ ಸಂಚಾರ ಸಹಜ ಸ್ಥಿತಿಗೆ ಬಂದಿದೆ.