ಪ್ರಾಣ ಕೈಯಲ್ಲಿಡಿದುಕೊಂಡು ಬದುಕು- ಬಿದ್ದಿರುವ ಮನೆಯಲ್ಲೇ ಜೀವನ.. ಮಳೆಗೆ ಹಲವು ಮನಸ್ಸುಗಳು ಗೀಳು
ವಿಜಯಪುರ: ಜಿಲ್ಲೆಯಾಧ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವಿಜಯಪುರ ಜಿಲ್ಲೆಯ ಆಲಮೇಲ ಹಾಗೂ ತಾಲೂಕಿನ ತಾರಾಪುರ ಗ್ರಾಮದಲ್ಲಿ 10ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿದ್ದು, ಜೀವನ ನಡೆಸುವುದು ದುಸ್ತರವಾಗಿದೆ.
ರಾತ್ರಿಯೀಡಿ ಮಳೆ ಸುರಿಯುತ್ತಿದ್ದರಿಂದ ಮನೆಯ ಗೋಡೆಗಳು ಬೀಳಲಾರಂಭಿಸಿವೆ. ಇದರಿಂದ ಗಾಬರಿಯಾದ ಗ್ರಾಮಸ್ಥರು, ನಿದ್ದೆಯಿಲ್ಲದೇ ಮನೆಯಲ್ಲಿ ಸಮಯ ಕಳೆಯಬೇಕಾದ ಸ್ಥಿತಿ ಬಂದೊದಗಿದೆ.
ಬೆಳಗಿನಿಂದ ಸ್ವಲಮಟ್ಟಿನ ಮಳೆ ಕಡಿಮೆಯಾಗಿದ್ದರಿಂದ ಬಿದ್ದ ಗೋಡೆಗಳ ಅಡಿಯಲ್ಲೇ ಕಾರ್ಯವನ್ನ ಮಾಡುತ್ತಿದ್ದಾರೆ. ಸ್ಥಳಾಂತರವಾಗಬೇಕ್ಕಿದ್ದ ತಾರಾಪೂರ ಗ್ರಾಮದಲ್ಲಿ ಇದೀಗ ಭಯದ ವಾತಾವರಣ ಮೂಡಿದೆ.
ತಾರಾಪುರ ಗ್ರಾಮ ಸೊನ್ನ ಬ್ರೀಜ್ ಹಿನ್ನಿರಿನಿಂದಾಗಿ ತಾರಾಪೂರ ಗ್ರಾಮ ಸ್ಥಳಾಂತರವಾಗಬೇಕಿತ್ತು. ಪ್ರತಿ ವರ್ಷ ಭೀಮಾನದಿಗೆ ಪ್ರವಾಹ ಉಂಟಾದಲ್ಲಿ ನೀರು ತಾರಾಪೂರ ಗ್ರಾಮವನ್ನ ಸುತ್ತುವರೆಯುತ್ತದೆ.
ಪ್ರವಾಹ ಬಂದಾಗ ಪ್ರತಿಸಲವೂ ಇದೇ ಅವಸ್ಥೆ ಆಗಿದ್ದರೂ ಕೂಡಾ ಯಾವುದೇ ನಿರ್ಧಾರಗಳನ್ನ ಅಧಿಕಾರಿಗಳು ತೆಗೆದುಕೊಳ್ಳದೇ ಇರುವುದು ಸ್ಥಳೀಯರಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ, ಇದೀಗ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.