ತುಂಬಿ ತುಳುಕಿದ ಬದಾಮಿಯ ಐತಿಹಾಸಿಕ ಅಹಸ್ತ್ಯತೀರ್ಥ- ಮನ್ನಿಕಟ್ಟಿಯಲ್ಲಿ ಮನೆಗಳ ಕುಸಿತ
ಬಾಗಲಕೋಟೆ: ಕಳೆದ ರಾತ್ರಿಯಿಂದ ಬೆಳಗಿನವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಎರಡು ಮಾಳಿಗೆ ಮನೆಗಳು ಕುಸಿತಗೊಂಡಿರುವ ಘಟನೆ ಬಾಗಲಕೋಟೆ ತಾಲ್ಲೂಕಿನ ಮನ್ನಿಕಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಈಶಪ್ಪ ಬಡಿಗೇರ, ಬಸಮ್ಮ ಹುಣಸಿಕಟ್ಟಿ ಎಂಬುವರಿಗೆ ಸೇರಿದ ಮನೆಗಳು ಕುಸಿತಗೊಂಡಿವೆ. ಬೆಳಿಗ್ಗೆ ಐದು ಗಂಟೆ ಸುಮಾರಿಗೆ ಮನೆ ಗೋಡೆ ಮೇಲ್ಚಾವಣಿ ಕುಸಿದಿದೆ. ಮನೆಯವರು ಬೆಳಿಗ್ಗೆ ಬೇಗ ಎದ್ದ ಹಿನ್ನೆಲೆ ಬಾರಿ ಅನಾಹುತ ತಪ್ಪಿದಂತಾಗಿದೆ. ಮತ್ತೊಂದೆಡೆ ನಿನ್ನೆ ಇಡೀ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ಮಳೆ ನೀರು ರಸ್ತೆ, ಜಮೀನುಗಳಿಗೆ ನುಗ್ಗಿದೆ. ಹುನಗುಂದ ಕರಡಿ ಮಾರ್ಗದ ಬೇಕಮಲದಿನ್ನಿ ಗ್ರಾಮದ ಬಳಿ ರಸ್ತೆ ಸಂಪೂರ್ಣ ಜಲಾವೃತ ಆಗಿದೆ. ಹೀಗಾಗಿ ಹುನಗುಂದ ಕರಡಿ ಮಾರ್ಗದ ಹತ್ತು ಹಳ್ಳಿಗಳ ಸಂಪರ್ಕ ಕಡಿತಗೊಂಡಿದ್ದು ರಸ್ತೆ ಮೇಲೆ ನಾಲ್ಕು ಅಡಿಗೂ ಹೆಚ್ಚು ನೀರು ಹರಿಯುತ್ತಿದೆ.
ಬಾದಾಮಿ ಪಟ್ಟಣದಲ್ಲಿರುವ ನಿನ್ನೆ ರಾತ್ರಿಯಿಂದಲೂ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬಾದಾಮಿ ಪಟ್ಟಣದ ಐತಿಹಾಸಿಕ ಕಾಲದ ಅಹಸ್ತ್ಯತೀರ್ಥ ಹೊಂಡ ತುಂಬಿ ಹರಿಯುತ್ತಿದ್ದು, ನಿರತರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.