Posts Slider

Karnataka Voice

Latest Kannada News

ಜಗದೀಶ ಶೆಟ್ಟರ ಮಹತ್ವಾಕಾಂಕ್ಷೆಯ ‘BRTS ಅವೈಜ್ಞಾನಿಕ’- ಅರವಿಂದ ಬೆಲ್ಲದ ಹೀಗೇಕೆ ಹೇಳಿದ್ರು..?

Spread the love

ಹುಬ್ಬಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಹತ್ವಾಕಾಂಕ್ಷೆಯ ಬಿಆರ್ ಟಿಎಸ್ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಹೇಳಿರುವುದು ಸೋಜಿಗ ಮೂಡಿಸಿದೆ.

ಬಿಆರ್ ಟಿಎಸ್ ಯೋಜನೆಯನ್ನ ಜಾರಿಗೆ ತರಲು ಮಾಜಿ ಮುಖ್ಯಮಂತ್ರಿಗಳು ಆಗಿರುವ ಜಗದೀಶ ಶೆಟ್ಟರ ಸಾಕಷ್ಟು ಆಸಕ್ತಿ ತೆಗೆದುಕೊಂಡು, ಅವಳಿನಗರದ ಜನರಿಗೆ ಗಿಫ್ಟ್ ರೂಪದಲ್ಲಿ ಈ ಯೋಜನೆಯನ್ನ ಜಾರಿಗೆ ತರುವಲ್ಲಿಯೂ ಮುಂಜೂಣಿಯಲ್ಲಿದ್ದು ಕಾರ್ಯವನ್ನಾರಂಭಿಸಿದ್ದರು.

ಆದರೆ, ಇದೇ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಹೇಳಿದ್ದು, ಬೇರೆ ಯಾವುದೇ ಪಕ್ಷದವರಲ್ಲ. ಅವರದ್ದೇ ಪಕ್ಷದ ಶಾಸಕ ಅರವಿಂದ ಬೆಲ್ಲದ ಹೇಳುತ್ತಿರುವುದು ಇದೀಗ ಗೊಂದಲ ಸೃಷ್ಟಿಸುವ ಸಾಧ್ಯತೆಯಿದೆ.

ನಿನ್ನೆ ಮುಖ್ಯಮಂತ್ರಿಗಳಿಗೆ ಶಾಸಕ ಅರವಿಂದ ಬೆಲ್ಲದ ಸಲ್ಲಿಸಿರುವ ಮನವಿಯಲ್ಲೂ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾದ್ರೇ, ಅವೈಜ್ಞಾನಿಕವಾದ ಯೋಜನೆಯನ್ನ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವನ್ನ ವಹಿಸಿದ್ದು ಜಗದೀಶ ಶೆಟ್ಟರ ಎನ್ನುವುದು ಕೂಡಾ ಮುಖ್ಯ.

ಈ ಘಟನೆಯನ್ನ ಅವಲೋಕನೆ ಮಾಡಿದಾಗ, ಬಿಆರ್ ಟಿಎಸ್ ಅವೈಜ್ಞಾನಿಕವಾಗಿಯೇ ಪೂರ್ಣಗೊಳ್ಳಲಿದೆಯೇ ಎಂಬ ಪ್ರಶ್ನೆ ಮೂಡದೇ ಇರದು. ಭಾರತೀಯ ಜನತಾ ಪಕ್ಷದವರೇ ತಂದಿರುವ ಯೋಜನೆಯಿದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.

ಈ ಯೋಜನೆಯ ಬಗ್ಗೆ ಮೊದಲು ಕಾಂಗ್ರೆಸ್ ನವರು ಮಾತನಾಡುತ್ತಿದ್ದರು. ಇದೀಗ ಬಿಜೆಪಿ ಶಾಸಕರೇ ಮಾತನಾಡುತ್ತಿರುವುದನ್ನೇ ನೋಡಿದ್ರೇ, ಈ ಬಿಆರ್ ಟಿಎಸ್ ತರುವುದರ ಹಿಂದೆ ಯಾರಿಗೆ ಲಾಭವಿದೆ ಎಂಬ ಪ್ರಶ್ನೆ ಮೂಡುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಕೂಡಾ ಇದನ್ನ ಗಮನಿಸಬೇಕಿದೆ.. ಅಲ್ವೇ..!


Spread the love

Leave a Reply

Your email address will not be published. Required fields are marked *