CRP-BRP ವರ್ಗಾವಣೆ ಮುನ್ನ ಕೌನ್ಸಲಿಂಗ್: ‘ಷಡಕ್ಷರಿ’ರಿಂದ ಸಚಿವರ ಜೊತೆ ಮಾತಾಡುವ ಭರವಸೆ
ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯಿಂದ 5 ವಷ೯ ಪೂರ್ಣಗೊಂಡ CRP&BRP ಗಳನ್ನು ವಗಾ೯ವಣೆ ಮುನ್ನ ಕೌನ್ಸೆಲಿಂಗ್ ನಡೆಸಬೇಕೆಂದು ಮನವಿ ಮಾಡಿಕೊಂಡ ಬೆನ್ನಲ್ಲೇ, ಸರಕಾರಿ ನೌಕರರ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ, ಶಿಕ್ಷಣ ಸಚಿವರ ಜೊತೆ ಮಾತನಾಡುವ ಭರವಸೆ ನೀಡಿದ್ರು.
C&R ನಿಯಮದ ಬಗ್ಗೆ ವಿಷಯ ಪ್ರಸ್ತಾವನೆ ಮಾಡಿ ಪ್ರಧಾನ ಕಾರ್ಯದರ್ಶಿ ಜೊತೆಗೆ ಮಾತನಾಡಿರುತ್ತೇನೆ. ಸಮಗ್ರ ತಿದ್ದುಪಡಿ ತರುವಂತೆ ಸೂಚನೆ ನೀಡಿದ್ದಾರೆ. ಶಿಕ್ಷಕರ ಡಯಾಲಿಸಿಸ್ ಮಾಡಿಸುಕೊಳ್ಳುವ ಶಿಕ್ಷಕರಿಗೆ ವಿಶೇಷ ರಜೆಯ ಸೌಲಭ್ಯ ದೊರಕಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಪೀಡಿತ ರೋಗಿಗಳಿಗೂ ಸಹ ಸೌಲಭ್ಯ ಪಡೆಯಲಿದ್ದಾರೆ. ಈ ವರ್ಷದಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಎಷ್ಟು ಶಿಕ್ಷಕರು ಬಡ್ತಿ ಪಡೆದಿದ್ದಾರೆ. ಇದು ರಾಜ್ಯ ನೌಕರರ ಸಂಘದ ಸಾಧನೆ. ತಮ್ಮ ಸಮಸ್ಯೆ ಬಗೆಹರಿಸಲು ಸದಾ ಸಿದ್ಧ ಎಂದು ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಸಹ ಶಿಕ್ಷಕರಿಂದ ಮುಖ್ಯ ಶಿಕ್ಷಕರ ಹುದ್ದೆ ನೀಡಲು ವಿಳಂಬವಾಗಿದೆ ಎಂದು ತಿಳಿದ ಅಧ್ಯಕ್ಷ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಪೋನ್ ಮಾಡಿ ಪ್ರಕ್ರಿಯೆ ಕೂಡಲೇ ಮುಗಿಸುವಂತೆ ತಿಳಿಸಿದರು. ಜೊತೆಗೆ ಅಧಿಕಾರಿಗಳಿಗೆ ನಿಮಗೆ ಸಮಸ್ಯೆ ಇದ್ದರೆ ತಿಳಿಸಿ. ನಾನು ಶಿಕ್ಷಣ ಸಚಿವರ ಜೊತೆ ಮಾತನಾಡುತ್ತೇನೆ ತಾವು ಬಡ್ತಿ ಪ್ರಕ್ರಿಯೆ ಮುಗಿಸಿ ಎಂದು ತಿಳಿಸಿದರು.
ಸಭೆಯಲ್ಲಿ. ಖಜಾಂಚಿ ಆರ್. ಶ್ರೀನಿವಾಸ್.ಪ್ರಧಾನ ಕಾರ್ಯದರ್ಶಿ. ಜಗದೀಶ್ ಗೌಡಪ್ಪ ಪಾಟೀಲ್. ಗೌರವ ಅಧ್ಯಕ್ಷ ಶಿವರುದ್ರಯ್ಯ ಹಾಗೂ ಆರ್. ಮೋಹನ್ ಕುಮಾರ್ ಉಪಸ್ಥಿತರಿದ್ದರು.