ಭೀಕರ ರಸ್ತೆ ಅಪಘಾತ-ಗರ್ಭೀಣಿ ಸೇರಿ 7ಜನರ ದುರ್ಮರಣ
ಕಲಬುರಗಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಏಳು ಜನರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಕಲಬುರಗಿ ಹೊರವಲಯದ ಆಳಂದ ರಸ್ತೆಯ ಸಾವಳಗಿ ಬಳಿ ಸಂಭವಿಸಿದೆ.
ಓರ್ವ ಗರ್ಭಿಣಿ ಸೇರಿ ನಾಲ್ವರು ಮಹಿಳೆಯರು , ಮೂರು ಜನ ಪುರುಷರ ಘಟನೆಯಲ್ಲಿ ಸಾವಿಗೀಡಾಗಿದ್ದು, ಗರ್ಭಿಣಿ ಮಹಿಳೆಯನ್ನ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ಕಲಬುರಗಿಗೆ ಕರೆದುಕೊಂಡು ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿವಾಸಿಗಳಾಗಿರುವ ಇರ್ಫಾನಾ ಬೇಗಂ – ಗರ್ಭಿಣಿ ಮಹಿಳೆ, ರುಚಿಯಾ ಬೇಗಂ, ಅಬೇದಾಬಿ ಬೇಗಂ, ಮುನೀರ್, ಮಹಮ್ಮದ್ ಅಲಿ, ಶೌಕತ್ ಅಲಿ, ಜಯತುನಬಿ ಎಂದು ಗುರುತಿಸಲಾಗಿದೆ.
ಕಾರು ಡಿಕ್ಕಿ ಹೊಡೆದ ಪರಿಣಾಮ ಲಾರಿಯೂ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದ ಯಾರಿಗೂ ಏನೂ ಆಗಿಲ್ಲ. ಕಾರು ಅಷ್ಟೊಂದು ರಭಸವಾಗಿ ಬಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಕಲಬುರಗಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.