Posts Slider

Karnataka Voice

Latest Kannada News

ವಿಜಯಪುರದಲ್ಲಿ ವಿದ್ಯುತ್ ಕಳ್ಳರಿಗೆ 3ಲಕ್ಷ 68ಸಾವಿರ ದಂಡ

Spread the love

ವಿಜಯಪುರ: ವಿದ್ಯುತ್ ಕಳ್ಳತನಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿಜ್ಜೂರ ಗ್ರಾಮದ 6 ಜನ ಆರೋಪಿಗಳಿಗೆ ಉಚ್ಚ ನ್ಯಾಯಾಲಯ 3,68,220 ರೂಗಳ ದಂಡ ವಿಧಿಸಲಾಯಿತು.

ಬಿಜ್ಜೂರ ಗ್ರಾಮದ ಬಸಲಿಂಗಪ್ಪ ಭಿಮಪ್ಪ ಕಮರಿ ಹಾಗೂ ಇತರೆ ಏಳು ಜನರ  ಮೇಲೆ 2008ರಲ್ಲಿ ವಿದ್ಯುತ್ತ ಕಳ್ಳತನಕ್ಕೆ ಸಂಬಂಧಿಸಿದಂತೆ ವಿಜಯಪುರದ ಹೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣವು ಎಸ್.ಪಿ.ಎಲ್ ನಂಬರ್ 04/2009ರಡಿ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ದಿನಾಂಕ 26-09-2012 ರಂದು 3,68,220 ರೂಗಳ ದಂಡ ಹಾಗೂ ಅದಕ್ಕೆ ತಪ್ಪದಲ್ಲಿ ಒಂದು ವರ್ಷ ಜೈಲುವಾಸ ಹೊರಡಿಸಿತ್ತು.

ಅದರಂತೆ ಆರೋಪಿತರು  ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು ವಿಜಯಪುರದ 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದು ಸದರಿ ಆರೋಪಿಗಳಿಗೆ ದಿನಾಂಕ 30-09-2020ರ ಒಳಗಾಗಿ ದಸ್ತಗಿರಿ ಮಾಡಿಕೊಂಡು ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ಆದೇಶದ ಮೇರೆಗೆ ದಿನಾಂಕ 24-09-2020 ರಂದು ಹುಬ್ಬಳಿ ಜಾಗೃತದಳದ ಎಸ್.ಪಿ ರವೀಂದ್ರ ಗಡಾದೆ ಮಾರ್ಗದರ್ಶನದಲ್ಲಿ ಎಂ.ಎನ್ ಶಿರಹಟ್ಟಿ ಹಾಗೂ  ಎಸ್.ವಾಯ್ ಗಲಗಲಿ ಮಹಿಳಾ ಪಿ.ಎಸ್.ಐ ನೇತೃತ್ವದಲ್ಲಿ ಇಬ್ಬರು ಮೃತಪಟ್ಟಿರುವ ಕಾರಣ 6 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು  ಆರೋಪಿಗಳಿಗೆ 3,68,220 ರೂಗಳನ್ನು ನ್ಯಾಯಾಲಯದಲ್ಲಿ ಭರಣ ಮಾಡಿಸಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *