ಜೆಡಿಎಸ್ ನಗರಸಭೆ ಸದಸ್ಯ ಬರ್ಭರ ಹತ್ಯೆ- ದುಷ್ಕರ್ಮಿಗಳು ಪರಾರಿ
ರಾಯಚೂರು: ಜನರೊಂದಿಗೆ ಮಾತನಾಡುತ್ತ ನಿಂತಾಗಲೇ ಬೇರೆ ಬೇರೆ ಕಡೆಯಿಂದ ಬಂದ ನಾಲ್ವರು ದುಷ್ಕರ್ಮಿಗಳು ಜೆಡಿಎಸ್ ನಗರಸಭೆ ಸದಸ್ಯನನ್ನ ಹರಿತವಾದ ಆಯುಧಗಳನ್ನ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.
ರಾಯಚೂರು ನಗರದ ಝಾಕೀರ ಹುಸೇನ ವೃತ್ತದಲ್ಲಿ ನಿಂತಿದ್ದ ಮಕಬೂಲ್ ಎಂಬ ಜೆಡಿಎಸ್ ಸದಸ್ಯನನ್ನೇ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹರಿತವಾದ ಆಯುಧದಿಂದ ಹೊಡೆದ ಪರಿಣಾಮ ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ
ತೀವ್ರ ಥರವಾಗಿ ಗಾಯಗಳಾದ ಪರಿಣಾಮ ರಕ್ತಸ್ರಾವವಾದ ಪರಿಣಾಮವೇ ಸಾವನ್ನಪ್ಪಿದ್ದು, ಕೊಲೆ ಮಾಡಿದ್ದು ನಾಲ್ವರು ಆರೋಪಿಗಳೆಂದು ಶಂಕಿಸಲಾಗಿದೆ.
ಇನ್ನೂ ಜನಸಂಚಾರ ಇರುವಾಗಲೇ ಘಟನೆ ನಡೆದಿದ್ದರಿಂದ ಜನರು ಆತಂಕಕ್ಕೆ ಬೀಳುವಂತಾಯಿತು. ಸದರ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.