‘ಹೆಬ್ಬಟ್ಟು ಮಂದಿ’ ದೂರಿಡಿ: ಸಕತ್ ಹೇಳಿಕೆ ಕೊಟ್ಟ ವಿನೋದ ಅಸೂಟಿ

ಧಾರವಾಡ: ಗ್ರಾಮ ಪಂಚಾಯತಿ ಚುನಾವಣೆಗಳು ಸಮೀಪಿಸುತ್ತಿದಂತೆ ನವಲಗುಂದ ಕಾಂಗ್ರೆಸ್ ಯುವನಾಯಕ ಹಾಗೂ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನೋದ ಅಸೂಟಿ ಹೇಳಿಕೆಯೊಂದನ್ನ ನೀಡಿದ್ದು, ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಗ್ರಾಮ ಪಂಚಾಯತಿಗಳಲ್ಲಿ ವಿದ್ಯಾವಂತರು ಬರಬೇಕು. ಆ ಮೂಲಕ ಗ್ರಾಮೀಣ ಅಭಿವೃದ್ಧಿಯಾಗಬೇಕು ಎಂಬುದನ್ನ ಮನಗಂಡಂತೆ ಹೇಳಿಕೆ ನೀಡಿರುವ ವಿನೋದ ಅಸೂಟಿ, ಹೆಬ್ಬಟ್ಟು ರಾಜಕೀಯ ಮಂದಿಯಿಂದ ದೂರವಿರಿ ಎಂದು ಕೇಳಿಕೊಂಡಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅನಕ್ಷರಸ್ಥರು ಚುನಾವಣೆಗೆ ನಿಲ್ಲುವುದು ಮತ್ತೂ ಬುದ್ಧಿವಂತರೂ ಅವರನ್ನ ನಡೆಸಿಕೊಂಡು ಹೋಗುವುದು ನಡೀತಾನೇಯಿದೆ. ಹೀಗಾಗಿ ಕ್ಷೇತ್ರದಲ್ಲಿ ಈ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
ಅಂದ ಹಾಗೇ ವಿನೋದ ಅಂದಿದ್ದೇನು ನೋಡಿ ಇಲ್ಲಿದೆ..
“ಗ್ರಾಮ ಪಂಚಾಯತ್ ಚುನಾವಣೆ”
ಹಿನ್ನಲೆಯಲ್ಲಿ ಹೆಬ್ಬೆಟ್ಟು ರಾಜಕೀಯ ಮಂದಿಯಿಂದ ದೂರ ಇರಿ ನಿಮ್ಮ ಊರಿನ ಅಭಿವೃದ್ಧಿ ಆಗಬೇಕಾದರೆ ಸ್ವಲ್ಪನಾದರು ವಿದ್ಯೆ ಬುದ್ದಿ ಇರೋ ಬುದ್ದಿವಂತರನ್ನ ಆಯ್ಕೆ ಮಾಡಿ ಊರಿನ ಮೂಲಬುತ ಸೌಕರ್ಯಗಳನ್ನ ಯಾರು ಪರಿಹರಿಸಲು ಮುಂದಾಗಬಲ್ಲರಿಗೆ ಮತ ನೀಡಿ.
ಈಗಾಗಲೇ ಯುವಕರಿಗೆ ಡಾಬಾ, ರೆಸ್ಟೋರೆಂಟ್ ಗಳಲ್ಲಿ ಎಣ್ಣೆ ಬಾಡೂಟ ಆಮಿಷ ತೋರಿಸುವ ಕೆಲಸ ಪ್ರಾರಂಭವಾಗಿದೆ, ಊರಿನ ಅಭಿವೃದ್ಧಿ ಮಾಡದೆ ಇದ್ದವರನ್ನು ಮತ್ತೊಮ್ಮೆ ಗದ್ದುಗೆಗೆ ಕೂರಿಸಬೇಡಿ ಹಣ, ಹೆಂಡಕ್ಕೆ ಜಾತಿ, ಅಂತ ನಿಮ್ಮ ಅಮೂಲ್ಯ ಮತ ಮಾರಿಕೊಳ್ಳಬೇಡಿ.
ಗ್ರಾಮಗಳು ಉದ್ದಾರವಾಗಬೇಕಾದರೆ ಗ್ರಾಮ ಪಂಚಾಯ್ತಿ ಸದಸ್ಯ ವಿದ್ಯಾವಂತನಾಗಿರಬೇಕು. ಕನಿಷ್ಠ ವಿದ್ಯಾರ್ಹತೆ ಇರೋರನ್ನ ಆಯ್ಕೆ ಮಾಡಿ.
ನಿಮ್ಮೂರ ಅಭಿವೃದ್ಧಿ. ನಿಮ್ಮ ಕೈಯಲ್ಲಿ..
ಇಂತಿ ನಿಮ್ಮ
ವಿನೋದ ಕೆ.ಅಸೂಟಿ
ಯೂತ್ ಕಾಂಗ್ರೆಸ್ ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷರು