‘ಪವರ್’ ಪ್ರತಿಭಟನೆ: DDWJ ಮನವಿ
ಹುಬ್ಬಳ್ಳಿ: ಪವರ್ ಟಿವಿಯ ಪ್ರಸಾರವನ್ನ ಬಂದ್ ಮಾಡಿದ ಕ್ರಮವನ್ನ ಖಂಡಿಸಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ನೀಡಿತು.
ಹುಬ್ಬಳ್ಳಿಯ ಮಿನಿ ವಿಧಾನಸೌಧದಲ್ಲಿರುವ ಕಚೇರಿಯಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ ಸಂಘದ ಅಧ್ಯಕ್ಷ ಗಣಪತಿ ಗಂಗೋಳ್ಳಿ, ಮಾಧ್ಯಮದ ಮೇಲೆ ಇಂತಹ ಪ್ರಹಾರಗಳು ನಡೆಯಬಾರದೆಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರ ಕುಂದರಗಿ ಮಾತನಾಡಿ, ಪವರ್ ಟಿವಿ ಬಂದ್ ಮಾಡುವ ಮೂಲಕ ಮಾಧ್ಯಮದ ಮೇಲೆ ಗದಾಪ್ರಹಾರ ನಡೆಸಿದಂತಾಗಿದೆ. ತಕ್ಷಣವೇ ಇದನ್ನ ಬಿಡಬೇಕು ಎಂದರು.
ಸಂಘದ ಗಿರೀಶ ಪಟ್ಟಣಶೆಟ್ಟಿ, ಜಗದೀಶ ಬುರ್ಲಬುಡ್ಡಿ, ಮೆಹಬೂಬ ಮುನವಳ್ಳಿ, ಪರಶುರಾಮ ತಹಶೀಲ್ದಾರ, ಪ್ರಕಾಶ ನೂಲ್ವಿ, ರಾಜಾ ದಖನಿ, ಶಿವಾಜಿ ಲಾತೂರಕರ, ರಾಕೇಶ, ವಿನಯ, ಮಹಾಂತೇಶ ಕಂಬಳಿ ಸೇರಿದಂತೆ ಹಲವರು ಉಪಸ್ಥಿತರಿದ್ದು, ಪವರ್ ಟಿವಿ ಬಂದ್ ಮಾಡಿರುವ ಕ್ರಮವನ್ನ ಖಂಡಿಸಿದರು.