ಐಪಿಎಲ್ ಬೆಟ್ಟಿಂಗ್- ನಾಲ್ಕು ಯುವಕರ ಬಂಧನ
ಬೆಳಗಾವಿ: ಕೊರೋನಾ ವೈರಸ್ ಹಾವಳಿಯ ಜೊತೆಗೆ ಇದೀಗ ಬೆಟ್ಟಿಂಗ್ ಹಾವಳಿಯೂ ಹೆಚ್ಚಾಗುತ್ತಿದ್ದು, ಯುವಕರೇ ಹೆಚ್ಚಾಗಿ ಬೆಟ್ಟಿಂಗ್ ದಂಧೆಯಲ್ಲಿ ಸಿಕ್ಕಿಬಿಳ್ಳುತ್ತಿರುವುದು ಮತ್ತಷ್ಟು ಆತಂಕಕ್ಕೀಡು ಮಾಡಿದೆ.
ಬೆಳಗಾಅವಿಯ ಖಡೇಬಜಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಡೆಲ್ಲಿ ಕಾಪ್ಟನ್ಸ್- ಸನರೈಸರ್ಸ್ ಹೈದ್ರಾಬಾದ ಐಪಿಎಲ್ ಪಂದ್ಯ ನಡೆಯುತ್ತಿದ್ದಾಗ ನಾಲ್ವರು ಯುವಕರು ಬೆಟ್ಟಿಂಗ್ ನಲ್ಲಿ ತೊಡಗಿರುವ ಖಚಿತ ಮಾಹಿತಿ ಆಧರಿಸಿ, ದಾಳಿ ನಡೆದಿದೆ.
ಖಡಕಗಲ್ಲಿಯ ಉತ್ಸವ್ ಪ್ರಮೋದ್ ಜಾಧವ್, ಖಂಜರಗಲ್ಲಿಯ ಶಕೀಲ್ ಶಹಾಪುರ್ವಾಲೆ, ಖಂಜರಗಲ್ಲಿಯ ಅಮೀರ್ ಮುಲ್ಲಾ ಹಾಗೂ ಚಾಂದುಗಲ್ಲಿಯ ಮುಜಾವರ್ ಚಾಂದವಾಲೆ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 15700 ರೂಪಾಯಿ ನಗದು ಹಾಗೂ 4 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡು ಈ ಬಗ್ಗೆ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ.
ಮಟಕಾ ಬಂಧನ
ಶಹಾಪುರ ಠಾಣೆಯ ಇನ್ಸ್‌ಪೆಕ್ಟರ್ ನೇತೃತ್ವದ ಮಟಕಾ ಆಡುತ್ತಿದ್ದ ಮೂವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಡಗಾಂವ್‌ನ ನವೀನ್ ಅಶೋಕ್ ಬುಚಡೆ, ಖಾಸಭಾಗ್‌ನ ಮೋಹಿನ್ ಶಕೀಲ್ ಶಿಡಿಲಯಾಲಿ ಹಾಗೂ ನವಗಳ್ಳಿಯ ಸರ್ಫರಾಜ್ ಶೇಕ್ ಎಂಬುವವರನ್ನ ಬಂಧನ ಮಾಡಿರುವ ಪೊಲೀಸರು, 12610 ರೂಪಾಯಿ ನಗದು ಹಾಗೂ ಮಟಕಾಗೆ ಬಳಕೆಯಾಘುತ್ತಿದ್ದ ಪೆನ್ನು, ಚೀಟಿಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.