ಬಿಆರ್ ಟಿಎಸ್ ಅವೈಜ್ಞಾನಿಕ: ಬೆಲ್ಲದ ಹೇಳಿಕೆ ಸತ್ಯ.. ಸತ್ಯ.. ಸತ್ಯ.. ಮತ್ತೆ ಬೇರೆಡೆ ಕುಸಿದಿದೆ ಸೇತುವೆ..
ಧಾರವಾಡ: ಬಿಜೆಪಿಯ ಮಹತ್ವಾಕಾಂಕ್ಷೆಯ ಬಿಆರ್ ಟಿಎಸ್ ಯೋಜನೆಯ ಸ್ಥಿತಿಯನ್ನ ಒಮ್ಮೆ ಸ್ಥಳಕ್ಕೆ ಭೇಟಿ ಕೊಟ್ಟು ನೋಡಬನ್ನಿ. ಒಂದು ಕಡೆ ಬಿದ್ದಿದೆ ಮತ್ತೂ ರಿಪೇರಿಯಾಗುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ಮತ್ತೊಂದು ಕಡೆ ಕುಸಿದು, ಮತ್ತಷ್ಟು ಆತಂಕ ಮೂಡಿಸುತ್ತಿದೆ.
ಏನಾಗ್ತಿದೆ ವೀಡಿಯೋ ಇದೆ ನೋಡಿ..
ಧಾರವಾಡದಿಂದ ಜೋಗೆಲ್ಲಾಪುರಕ್ಕೆ ಹೋಗುವ ಕಡೆ ಮತ್ತೆ ಸೇತುವೆ ಕುಸಿದು ಬೀಳುತ್ತಿದೆ. ಕಳೆದ ವಾರ ಬಿದ್ದಿದ್ದನ್ನ ದುರಸ್ತಿ ಮಾಡಲಾಗುತ್ತಿದೆ. ಆದರೆ, ಮತ್ತೊಂದು ಕಡೆ ಕುಸಿಯುತ್ತಿರುವುದು ಕಾಮಗಾರಿಯ ಬಗ್ಗೆ ಸಂಶಯ ಮೂಡಿಸುತ್ತಿದೆ.
ಇದು ನಿಮ್ಮದೇ ಪಕ್ಷದ ಮಹತ್ವಾಕಾಂಕ್ಷೆಯ ಯೋಜನೆ. ಈಗಾಗಲೇ ಇದು ಅವೈಜ್ಞಾನಿಕವಾಗಿದೆ ಎಂದು ನಿಮ್ಮದೇ ಪಕ್ಷದ ಶಾಸಕ ಅರವಿಂದ ಬೆಲ್ಲದ ಮುಖ್ಯಮಂತ್ರಿಗಳಿಗೆ ಹೇಳಿ ಬಂದಿದ್ದಾರೆ. ಇದು ಹಾಗೇ ಆಗಿದೆ ಎನ್ನುವುದಕ್ಕೆ ಸಾಕ್ಷಿಗಳು ಸೇತುವೆ ಕುಸಿಯುವ ಮೂಲಕ ಸಿಗುತ್ತಿವೆ..