Exclusive-ಹುಬ್ಬಳ್ಳಿಯಲ್ಲಿ ಶ್ರೀಗಂಧಚೋರರ ಬಂಧನ- ಹೇಗಿತ್ತು ಗೊತ್ತಾ ಕಾರ್ಯಾಚರಣೆ..?
ಹುಬ್ಬಳ್ಳಿ: ಬೇರೆ ಜಿಲ್ಲೆಯ ತಾಲೂಕೊಂದರಲ್ಲಿ ಶ್ರೀಗಂಧದ ಗಿಡವನ್ನ ಕಡಿದು ಮನೆಯೊಳಗೆ ಮುಚ್ಚಿಟ್ಟುಕೊಂಡು, ಗಿರಾಕಿ ಜೊತೆಗೆ ವ್ಯವಹಾರ ಕುದುರಿಸುತ್ತಿರುವಾಗಲೇ ಪೊಲೀಸರು ದಾಳಿ ನಡೆಸಿ, ಇಬ್ಬರನ್ನೂ ಬಂಧಿಸುವಲ್ಲಿ ಗೋಕುಲ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ಸಹದೇವನಗರದ ಸಿದ್ಧಾರೂಢ ಉಪ್ಪಾರ ಹಾಗೂ ಕಿರಣ ಬಸವ ಎಂಬ ಖದೀಮರೇ, ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಶ್ರೀಗಂಧದ ಮರವನ್ನ ಕಡಿದುಕೊಂಡು ಮನೆಯಲ್ಲೇ ಶ್ರೀಗಂಧವನ್ನ ಮುಚ್ಚಿಟ್ಟಿದ್ದರು.
ಹದಿನೈದು ಕೆಜಿ ಶ್ರೀಗಂಧದ ಕಟ್ಟಿಗೆಯನ್ನ ಮಾರಾಟ ಮಾಡಲು ಗಿರಾಕಿಯನ್ನ ಸಂಪರ್ಕಿಸಿದ್ದ ಖದೀಮರು, ಖರೀದಿ ಮಾಡುವವ ಜೊತೆಗೆ ಮಾತುಕತೆ ನಡೆಸುವ ಸಮಯದಲ್ಲಿ ದಾಳಿ ಮಾಡಿದಾಗ, ಮರ ಕಡಿದು ತಂದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇಬ್ಬರನ್ನೂ ಬಂಧನ ಮಾಡಿರುವ ಗೋಕುಲ ಠಾಣೆಯ ಪೊಲೀಸರು, ಅವರಿಂದ 15 ಕೆಜಿ ಶ್ರೀಗಂಧವನ್ನ ವಶಕ್ಕೆ ಪಡೆದಿದ್ದಾರೆ.