ಬಾಬರಿ ಮಸೀದಿ ಧ್ವಂಸ: ಆಕಸ್ಮಿಕ ಘಟನೆಯಂತೆ- ಆಡ್ವಾಣಿ, ಉಮಾಭಾರತಿಗೆ ಬಿಗ್ ರಿಲೀಫ್
ಲಕ್ನೋ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಅಂತೀಮ ತೀರ್ಪು ನೀಡಿದ್ದು, ಮಸೀದಿ ಧ್ವಂಸವಾಗಿದ್ದು ಪೂರ್ವನಿಯೋಜಿತವಲ್ಲ, ಅದೊಂದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಹೇಳಿದೆ.
ಲಕನೌ ಸಿಬಿಐ ವಿಶೇಷ ಕೋರ್ಟನಿಂದ ತೀಪ್ರು ಹೊರಬಿದ್ದಿದ್ದು ಎಲ್ಲ 32 ಆರೋಪಿಗಳು ನಿರ್ದೋಷಿಯಂದು ಆದೇಶ ಹೊರಡಿಸಿದೆ. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ಲರಿಗೂ ಕ್ಲೀನ್ ಚಿಟ್ ನೀಡಲಾಗಿದೆ.
ಪ್ರಕರಣದಲ್ಲಿ ಪ್ರಮುಖವಾಗಿ ಎಲ್.ಕೆ.ಆಡ್ವಾಣಿ, ಉಮಾಭಾರತಿ ಸೇರಿದಂತೆ ಎಲ್ಲರಿಗೂ ಕ್ಲೀನ್ ಚಿಟ್ ನೀಡಿ ಸಿಬಿಐ ನ್ಯಾಯಾಧೀಶ ಎಸ್.ಕೆ.ಯಾದವ ಆದೇಶ ನೀಡಿದೆ.
ಮಸೀದಿ ಧ್ವಂಸಕ್ಕೆ ಕ್ರಿಮಿನಲ್ ಸಂಚು ರೂಪಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದೊಂದು ಆಕಸ್ಮಿಕವಾಗಿ ನಡೆದ ಘಟನೆಯಾಗಿದ್ದರಿಂದ ಎಲ್ಲರಿಗೂ ಕ್ಲೀನ್ ಚಿಟ್ ನೀಡಲಾಗಿದೆ.