ರಾತ್ರಿ ವಾಸ್ತವ್ಯ-ಬೆಳ್ಳಂಬೆಳಿಗ್ಗೆ ಶೌಚಾಲಯ ಕ್ಲೀನ್ ಮಾಡಿದ ಜಿಪಂ ಅಧ್ಯಕ್ಷೆ- ಯಾಕೆ ಗೊತ್ತಾ..?
ವಿಜಯಪುರ: ಕಳೆದ ರಾತ್ರಿಯೇ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಾಳಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದ ಜಿಲ್ಲಾ ಪಂಚಾಯತಿ ಅಧ್ಯಕ್ಷೆ, ಬೆಳ್ಳಂಬೆಳಿಗ್ಗೆ ಶೌಚಾಲಯವನ್ನ ಸ್ವಚ್ಚಗೊಳಿಸಿದ್ದಾರೆ.
ಹೌದು.. ವಿಜಯಪುರ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಯಾವುದೇ ಅಳುಕಿಲ್ಲದೇ ಶೌಚಾಲಯವನ್ನ ಬ್ರೆಶ್ ಹಿಡಿದು ನೀರು ಹಾಕಿ ಸ್ವಚ್ಚ ಮಾಡಿದ್ರು. ಇದಕ್ಕೆ ಕಾರಣವಾಗಿದ್ದು, ಮಹಾತ್ಮಾ ಗಾಂಧಿಯವರ ಜನ್ಮದಿನಾಚರಣೆ.
ಬಾಪು ಅವರ ಕಂಡು ಕನಸು ನನಸು ಮಾಡುವ ಬಯಕೆಯನ್ನ ಈ ಮೂಲಕ ವ್ಯಕ್ತಪಡಿಸಿದ ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ನಾವೂ ಯಾವುದೇ ಕಾರ್ಯವನ್ನ ಬೇಸರದಿಂದ ಮಾಡಬಾರದು. ಮೊದಲು ಸ್ವಚ್ಚತೆಗೆ ಆಧ್ಯತೆ ಕೊಡಬೇಕೆಂಬ ಭಾವನೆಯನ್ನ ಈ ಮೂಲಕ ವ್ಯಕ್ತಪಡಿಸಿದ್ರು.
ತಾವೇ ಆಸಕ್ತಿ ವಹಿಸಿ ರಾತ್ರಿಯೇಲ್ಲ ಆರೋಗ್ಯ ಕೇಂದ್ರದಲ್ಲಿ ಉಳಿದು ಅಲ್ಲಿರುವ ತೊಂದರೆಗಳ ಬಗ್ಗೆಯೂ ಮಾಹಿತಿಯನ್ನ ಪಡೆದರು. ಇಲಾಖೆ ನೌಕರರ ಸಮಸ್ಯೆಗಳನ್ನೂ ಆಲಿಸಿದ್ದರು. ಬೆಳಿಗ್ಗೆ ಮಾತ್ರ ತಾವೇ ಶೌಚಾಲಯ ಶುಚಿಗೊಳಿಸಿ, ಇತರರಿಗೆ ಮಾದರಿಯಾದರು.
ಜಿಪಂ ಸದಸ್ಯೆಯರಾದ ಪ್ರೇಮಾಬಾಯಿ ಚವ್ಹಾಣ, ಪದ್ಮಾವತಿ ವಾಲೀಕಾರ ಜಿಪಂ ಅಧ್ಯಕ್ಷರ ಈ ಕಾರ್ಯಕ್ಕೆ ಸಾಥ್ ನೀಡಿದ್ರು.