ಚಪ್ಪಾಳೆ ಬೇಡ-ಸೌಲಭ್ಯ ಕೊಡಿ: ಧಾರವಾಡದಲ್ಲಿ ಆರೋಗ್ಯ ಸಿಬ್ಬಂದಿಗಳ ಹೋರಾಟ

ಧಾರವಾಡ: ಸಮಾನ ಕೆಲಸಕ್ಕೆ ಸಮಾನ ವೇತನ ಕೊಡುವ ಜೊತೆಗೆ ಸೇವಾ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಂದು ಡಿಎಚ್ಓ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈಧ್ಯಕೀಯ ಶಿಕ್ಷಣ ಗುತ್ತಿಗೆ ಹಾಗು ಹೊರಗುತ್ತಿಗೆ ನೌಕರರ ಸಂಘ ಮತ್ತು ಧಾರವಾಡ ಜಿಲ್ಲಾ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಸಹಕಾರದೊಂದಿಗೆ ಭಾರತೀಯ ಮಜ್ದೂರ ಸಂಘದೊಂದಿಗೆ ಸಂಯೋಜಿತವಾಗಿ ಅನಿರ್ಧಿಷ್ಟಾವದಿ ಮುಷ್ಕರವನ್ನ ಆರಂಭಿಸಲಾಗಿದೆ.
ಧಾರವಾಡದ ಡಿಎಚ್ಓ ಕಚೇರಿ ಎದರು ಹೋರಾಟ ನಡೆಸಿದ ಸಿಬ್ಬಂದಿಗಳು, ಗುತ್ತಿಗೆ ಮತ್ತು ಹೊರಗುತ್ತಿಗೆ ಕೊರೋನಾ ವಾರಿಯರ್ಸಗಳಿಗೆ ಚಪ್ಪಾಳೆ ಬೇಡ, ಸೌಲಭ್ಯ ಬೇಕೆಂದು ಆಗ್ರಹಿಸಿದರು.
ಆರೋಗ್ಯ ಇಲಾಖೆ ಸಿಬ್ಬಂದಿಗಳ ಬೇಡಿಕೆಯನ್ನ ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೇ ಮುಂದಿನ ದಿನದಲ್ಲಿ ಮತ್ತಷ್ಟು ಹೋರಾಟ ತೀವ್ರಗೊಳ್ಳಲಿದೆ ಎಂದು ಪ್ರತಿಭಟನಾನಿರತರು ಎಚ್ಚರಿಕೆ ನೀಡಿದ್ರು.