ಹುಬ್ಬಳ್ಳಿಯಲ್ಲಿ ಗಾಂಜಿಗರ ಬಂಧನ- ಒಬ್ಬ ಹುಲ್ಲಂಬಿಯಾತ.. ಮತ್ತೋಬ್ಬ ಯಾರೂ ಗೊತ್ತಾ..?
ಹುಬ್ಬಳ್ಳಿ: ವಾಣಿಜ್ಯನಗರದಲ್ಲಿ ಗಾಂಜಾ ಮಾರಾಟ ಮಾಡುವವರನ್ನ ಹಿಡಿಯುವ ತಂತ್ರಗಾರಿಕೆ ಪೊಲೀಸರಿಂದ ಮುಂದುವರೆದಿದ್ದು, ಇಂದು ಮತ್ತೆ ಇಬ್ಬರನ್ನ ಬಂಧಿಸಿ, 590 ಗ್ರಾಂ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ.
ಕಲಘಟಗಿ ತಾಲೂಕಿನ ಹುಲ್ಲಂಬಿ ಗ್ರಾಮದ ಸಹದೇವಪ್ಪ ಕಲ್ಲಪ್ಪ ನಾಯ್ಕರ ಮತ್ತು ಹುಬ್ಬಳ್ಳಿ ಶಾಂತಿನಗರದಲ್ಲಿ ಸಾಕು ನಾಯಿ ವ್ಯವಹಾರ ಮಾಡುತ್ತಿದ್ದ ನಿಖಿಲ ಮೈಕಲ್ ಡೇವಿಡ್ ಎಂಬ ಇಬ್ಬರನ್ನ ಹಳೇಹುಬ್ಬಳ್ಳಿ ಗಣೇಶ ವೇ ಬ್ರಿಡ್ಜ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದಾಗ ಬಂಧನ ಮಾಡಿದ್ದಾರೆ.
ಬಂಧಿತರಿಂದ 5900 ರೂಪಾಯಿ ಬೆಲೆಯ 590 ಗ್ರಾಂ ಗಾಂಜಾವನ್ನ, ಒಂದು ಬೈಕ್ ಮತ್ತು ಎರಡು ಮೊಬೈಲ್ ಗಳನ್ನ ವಶಕ್ಕೆ ಪಡೆದುಕೊಂಡು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇನ್ಸಪೆಕ್ಟರ್ ಎನ್.ಸಿ.ಕಾಡದೇವರಮಠ, ಪಿಸೈಗಳಾದ ಬಿ.ಕೆ.ಹೂಗಾರ, ರಾಘವೇಂದ್ರ ಗುರ್ಲ, ಸಿಬ್ಬಂದಿಗಳಾದ ಸಂಜೀವಕುಮಾರ ಕುರಹಟ್ಟಿ, ಸಿ.ಎಂ.ಕಂಬಾಳಿಮಠ, ಫಕ್ಕಿರೇಶ ಗೊಬ್ಬರಗುಂಪಿ, ಎ.ಎಂ.ತಹಶೀಲ್ದಾರ, ಎಂ.ಡಿ.ಬಡಿಗೇರ, ರವಿ ಕೋಳಿ, ಬಿ.ಟಿ.ಪಶುಪತಿಹಾಳ, ಜಯಶ್ರೀ ಚಿಲ್ಲೂರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

