ಯೋಗಿ ವಿರುದ್ಧ ಬಂಡಾಯದ ನೆಲದಲ್ಲಿ ಹೋರಾಟ: ರಸ್ತೆ ತಡೆ
ಧಾರವಾಡ: ದಲಿತ ಯುವತಿಯನ್ನ ಅತ್ಯಾಚಾರ ಮಾಡಿದ ಘಟನೆಯನ್ನ ಖಂಡಿಸಿ ವಿವಿಧ ಸಂಘಟನೆಗಳು ಹಾಗೂ ಕಾಂಗ್ರೆಸ್ ಸಮಿತಿ ನವಲಗುಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು.
ನೂರಾರೂ ಕಾರ್ಯಕರ್ತರು ರಸ್ತೆ ತಡೆ ನಡೆಸುವ ಮೂಲಕ ಹೋರಾಟ ನಡೆಸಿದರು. ಈ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರಿಗೆ ಮನವಿ ಮಾಡಿಕೊಂಡಿದ್ದು, ಮನವಿ ಇಲ್ಲಿದೆ ನೋಡಿ..
ಇವರಿಗೆ,
ಘನವೆತ್ತ ಸನ್ಮಾನ್ಯ ಶ್ರೀ ರಾಮನಾಥ್ ಕೋವಿಂದ್
ಗೌರವಾನ್ವಿತ ರಾಷ್ಟ್ರಪತಿಗಳ, ಭಾರತ ಸರ್ಕಾರ
ಮಾನ್ಯ ತಹಶೀಲ್ದಾರರು, ನವಲಗುಂದ. ಉತ್ತರ ಪ್ರದೇಶದ ಹತ್ರಾಸ ಎಂಬಲ್ಲಿ ದಲಿತ ಯುವತಿಯ ಮೇಲೆ ನಾಲ್ಕು ಜನ ಸಾಮೂಹಿಕ ಅತ್ಯಾಚಾರ ವೆಸಗಿದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಗಲ್ಲು ಶಿಕ್ಷೆಯನ್ನು ವಿಧಿಸುವ ಕುರಿತು,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉತ್ತರ ಪ್ರದೇಶದ ಹತ್ರಾಸ ಎಂಬಲ್ಲಿ ದಲಿತ 19 ವರ್ಷದ ಯುವತಿಯಾದ ಕು.ಮನಿಷಾ ವಾಲ್ಮೀಕಿ ಎಂಬುವರ ಮೇಲೆ ಮೇಲ್ವರ್ಗದ ನಾಲ್ಕು ಜನ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿ ಅವಳ ಬೆನ್ನು ಮುರಿದು ಇಷ್ಟು ಸಾಲದು ಎಂಬಂತೆ ಯುವತಿಯ ನಾಲಿಗೆಯನ್ನು ಹೀನಾಯವಾಗಿ ಕತ್ತರಿಸಿ ತುಂಬಾ ಚಿತ್ರಹಿಂಸೆ ನೀಡಿದ್ದಾರೆ. ಇದು ಅತ್ಯಂತ ಖಂಡನೀಯ ಮತ್ತು ಇತ್ತೀಚಿನ ದಿನಗಳಲ್ಲಿ ದಲಿತ ಶೂ ಮಕ್ಕಳ ಮೇಲೆ ಪದೇ ಪದೇ ಅನ್ಯಾಯ, ಅತ್ಯಾಚಾರ ಪ್ರಕರಣಗಳು ತುಂಬಾ ನಡೆಯುತ್ತಿದ್ದು, ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಸದರಿ ಅತ್ಯಾಚಾರಕ್ಕೊಳಗಾದ ಯುವತಿ ತುಂಬಾ ದುರ್ಬಲರನ್ನು ಇಂತಹವರ ಮೇಲೆ ಈ ರೀತಿಯಾಗಿ ಹೀನಾಯವಾಗಿ ಕೃತ್ಯ ಎಸಗಿರುವುದು ಇಡೀ ಮಾನವ ಸಮಾಜ ತಲೆತಗ್ಗಿಸುವಂತಹ ಕೃತ್ಯ ಇದಾಗಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಸರ್ಕಾರಗಳು ಪೊಲೀಸ್ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕು ಮತ್ತು ಮಹಿಳೆಯರಿಗೆ ಸೂಕ್ತ ಭದ್ರತೆಯನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಅತ್ಯಾಚಾರವೆಸಗಿರುವ ಅಪರಾಧಿಗಳು ಯಾರೇ ಆಗಿದ್ದರೂ, ಎಷ್ಟೇ ಪ್ರಭಾವಿಗಳಾಗಿದ್ದರೂ, ಸದರಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಭೀಮ ಆರ್ಮಿ, ಭಾರತ ಏಕತಾ ಮಿಷನ್ ಸಂಘಟನೆ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಮಹರ್ಷಿ ವಾಲ್ಮೀಕಿ ಸಂಘಟನೆಯು ಆಗ್ರಹಿಸುತ್ತದೆ. ಅತ್ಯಾಚಾರಕ್ಕೆ ಒಳಗಾದ ಯುವತಿಯ ಕಂಬಕ್ಕೆ ಉತ್ತರಪ್ರದೇಶ ಸರಕಾರ 1 ಕೋಟಿ ರೂ.ಗಳ ಪರಿಹಾರ ಮತ್ತು ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಎಲ್ಲಿ ಸಂಘಟನೆಯವರು ಆಗ್ರಹಿಸುತ್ತೇವೆ.


