ಗೋಪನಕೊಪ್ಪದಲ್ಲಿ ಮಹಾತ್ಮಾ-ಶಾಸ್ತ್ರಿ ಹುಟ್ಟುಹಬ್ಬ ಆಚರಣೆ

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಹುಬ್ಬಳ್ಳಿ-ಧಾರವಾಡ ರೈತ ಮೋರ್ಚಾ ಅಧ್ಯಕ್ಷ ಈಶ್ವರಗೌಡ ಪಾಟೀಲ ನೇತೃತ್ವದಲ್ಲಿ ಶ್ರೀ ಗ್ರಾಮದೇವತಾ ದೇವಸ್ಥಾನದಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲಬಹದ್ದೂರ ಶಾಸ್ತ್ರೀಯವರ ಹುಟ್ಟುಹಬ್ಬವನ್ನ ಆದರದಿಂದ ಆಚರಣೆ ಮಾಡಲಾಯಿತು.
ಶ್ರೀ ಲಲಿತಾ ಶಾಸ್ತ್ರ ಸಹಸ್ರನಾಮವಳಿ ಮಹಿಳಾ ಮಂಡಲ ವತಿಯಿಂದ ಆಯೋಜನೆಗೊಂಡ ಕಾಯ್ರಕ್ರಮದಲ್ಲಿ ಮಹಾತ್ಮಾರಿಗೆ ದೀಪ ಬೆಳಗಿಸಿ, ಪುಷ್ಟಾರ್ಪಣೆ ಮಾಡಿ ನಮಿಸಲಾಯಿತು.
ಇದೇ ಸಮಯದಲ್ಲಿ ಶ್ರೀ ಗ್ರಾಮದೇವತೆಗೆ ವಿಶೇಷ ಪೂಜೆಯನ್ನ ಸಲ್ಲಿಸಲಾಯಿತು. ದೇಶಧ್ಯಾಂತ ಹೆಚ್ಚಾಗುತ್ತಿರುವ ಮಹಾಮಾರಿ ಕೊರೋನಾ ಇಲ್ಲಿಂದ ತೊಲಗುವಂತೆ ಮಾಡೆಂದು ಪ್ರಾರ್ಥಿಸಲಾಯಿತು.
ಭಾರತೀಯ ಜನತಾ ಪಕ್ಷದ ಹುಬ್ಬಳ್ಳಿ-ಧಾರವಾಡ ರೈತ ಮೋರ್ಚಾ ಅಧ್ಯಕ್ಷ ಈಶ್ವರಗೌಡ ಪಾಟೀಲ, ಹಿರಿಯರಾದ ಹನುಂಮತಗೌಡ ಪಾಟೀಲ ಸೇರಿದಂತೆ ಮಹಿಳಾ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.