“ಶ್ರೀ ಸಿದ್ಧಾರೂಢ” ಗಿರ್ಮಿಟ್ ಬ್ಯಾರಿಕೇಡ್ – ಎಚ್ಚೆತ್ತ ಪೊಲೀಸ್

ಹುಬ್ಬಳ್ಳಿ: ಸಾರ್ವಜನಿಕರಿಗೆ ಅನುಕೂಲ ಮಾಡುವ ಉದ್ದೇಶದಿಂದ ಪೊಲೀಸರು ಬಳಕೆ ಮಾಡುವ ಬ್ಯಾರಿಕೇಡಗಳನ್ನ ತನ್ನ ಗಿರ್ಮಿಟ್ ಅಂಗಡಿಗೆ ಬಳಕೆ ಮಾಡಿಕೊಂಡಿದ್ದ, ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರು ಎಚ್ಚೆತ್ತು, ಅವುಗಳನ್ನ ಬದಲಾವಣೆ ಮಾಡಿದ್ದಾರೆ.
ಸಿಟಿ ಕ್ಲಿನಿಕ್ ಬಳಿ ಸಂಜೆಯಾದರೇ ಸಾಕು, ಐದಾರು ಪೊಲೀಸ್ ಬ್ಯಾರಿಕೇಡ್ ಗಳನ್ನ ತೆಗೆದುಕೊಂಡು ತನ್ನ ಅಂಗಡಿಯ ಸುತ್ತಲೂ ಹಾಕಿಕೊಂಡು ಗಿರ್ಮಿಟ್ ಮಾರಾಟ ಮಾಡುತ್ತಿದ್ದ. ಇದರಿಂದ ಸಂಚಾರ ಬದಲಾವಣೆಯಾಗಬೇಕಾದ ಬ್ಯಾರಿಕೇಡಗಳು ಇಲ್ಲದೇ ಇರುವುದಿರಂದ ಬೈಕ್ ಸವಾರರು ಮತ್ತಷ್ಟು ಸಮಸ್ಯೆಯನ್ನ ಎದುರಿಸುವಂತಾಗಿತ್ತು.
ಸಾರ್ವಜನಿಕರ ಉಪಯೋಗಕ್ಕೆ ಇರಬೇಕಾದ ಬ್ಯಾರಿಕೇಡ್ ಗಳು ಹೀಗೆ ಅನಾಮತ್ತಾಗಿ ಗಿರ್ಮಿಟ್ ಅಂಗಡಿಗೆ ಸೆಕ್ಯುರಿಟಿಯಂತೆ ಬಳಕೆಯಾಗುತ್ತಿದ್ದವು. ಈ ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರು ಅವುಗಳನ್ನ ತೆಗೆದು, ಸಂಗೋಳ್ಳಿ ರಾಯಣ್ಣ ವೃತ್ತ ಮತ್ತೂ ಶಿರಡಿ ಸಾಯಿ ಮಂದಿರದ ಬಳಿ ತೆಗೆದುಕೊಂಡು ಹೋಗಲಾಗಿದೆ.
ಶ್ರೀ ಸಿದ್ಧಾರೂಢ ಗಿರ್ಮಿಟ್ ಅಂಗಡಿ, ಇಂದು ಬ್ಯಾರಿಕೇಡ್ ಇಲ್ಲದೇ ಆರಂಭವಾಗಿದೆ.