ಧಾರವಾಡ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ- 4ಸಾವು: ಹತ್ತಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ
ಧಾರವಾಡ: ಸವದತ್ತಿಯಿಂದ ಧಾರವಾಡ ಕಡೆಗೆ ಬರುತ್ತಿದ್ದ ಬೊಲೇರೋ ವಾಹನ ಟೆಂಪೋಗೆ ಡಿಕ್ಕಿ ಹೊಡೆದು, ನಂತರ ಟಾಟಾ ಏಸ್ ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಹತ್ತಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡ ಘಟನೆ ಈಗಷ್ಟೇ ನಡೆದಿದೆ.
ಕೆಲಸಕ್ಕೆ ಹೋಗಿ ಮರಳಿ ರಾಮದುರ್ಗಕ್ಕೆ ಹೊರಟಿದ್ದ ಟಾಟಾ ಏಸ್ ನಲ್ಲಿದ್ದವರಿಗೆ ಹೆಚ್ಚು ಪ್ರಾಣ ಹಾನಿಯಾಗಿದ್ದು, ಸವದತ್ತಿಯಿಂದ ನಾಲ್ಕು km ಅಂತರದ ಧಾರವಾಡ ರಸ್ತೆಯಲ್ಲಿ ನಡೆದಿದೆ. ಬೊಲೇರೋ ವಾಹನದಿಂದಲೇ ಸರಣಿ ಅಪಘಾತ ನಡೆದಿದ್ದು, ವೇಗವಾಗಿ ವಾಹನ ಚಲಾಯಿಸುತ್ತಿದ್ದಾಗ ಒಂದರ ಹಿಂದೆ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತ ನಡೆದ ಸ್ಥಳದಲ್ಲಿ ರಸ್ತೆಯುದ್ದಕ್ಕೂ ಮಹಿಳೆಯರು, ಮಕ್ಕಳು ಚೆಲ್ಲಾಪಿಲ್ಲಿಯಾಗಿ ಬಿದ್ದು ರೋಧಿಸುತ್ತಿದ್ದರು. ಘಟನಾ ಸ್ಥಳಕ್ಕೆ ಸವದತ್ತಿ ಠಾಣೆ ಇನ್ಸಪೆಕ್ಟರ್ ಮಂಜುನಾಥ ನಡುವಿನಮನಿ ಭೇಟಿ ನೀಡಿ, ಎಲ್ಲರನ್ನೂ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಟಾಟಾ ಎಸ್ ವಾಹನ ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ್ದು ಎನ್ನಲಾಗುತ್ತಿದೆ.