ಕೊಪ್ಪದಕೇರಿ ‘ರಾಮ’ಪ್ಪ ಇನ್ನಿಲ್ಲ- ಬಡಿಗೇರ ಇಟ್ಟಂಗಿ ಮಾಲೀಕ ಬಾರದ ಲೋಕಕ್ಕೆ
ಧಾರವಾಡ: ಇಲ್ಲಿಯ ಕೊಪ್ಪದಕೇರಿ ನಿವಾಸಿ ರಾಮಪ್ಪ ಬಡಿಗೇರ (70) ಶುಕ್ರವಾರ ರಾತ್ರಿ ನಿಧನರಾಗಿದ್ದು, ಮೃತರು ಪತ್ನಿ, ಮೂವರು ಪುತ್ರಿಯರು ಅಗಲಿದ್ದಾರೆ.
ಮೃತ ರಾಮಪ್ಪ ಬಡಿಗೇರ ಅವರದ್ದು ಇಟ್ಟಂಗಿಯ ಬಟ್ಟಿಯಿತ್ತು. ಈ ಭಾಗದಲ್ಲಿ ಬಡಿಗೇರ ಇಟ್ಟಂಗಿ ಅಂತೆ ಫೇಮಸ್ ಆಗಿದ್ದರು. ಬಡಿಗೇರ ಇಟ್ಟಂಗಿ ಅಂದರೆ ಸಾಕು ಜನ ಕಣ್ಣು ಮುಚ್ಚಿ ತೆಗೆದುಕೊಳ್ಳುತ್ತಿದ್ದರು. ಅಷ್ಟೊಂದು ನಂಬಿಕೆಯನ್ನ ಉಳಿಸಿಕೊಂಡು ಬಂದಿದ್ದರು.
ಇವರ ತಂದೆ ಸೈದಾಪುರ ದ್ಯಾಮವ್ವ ಗುಡಿ ಪೂಜಾರಿಕೆ ಮಾಡುತ್ತಿದ್ದರು. ಸಮಾಜದ ಯಾವುದೇ ಕೆಲಸವಿದ್ದರು ಮೂಂಚುಣಿಯಲ್ಲಿ ಇರುತ್ತಿದ್ದರು. ಸೈದಾಪೂರದಲ್ಲಿ ಎಲ್ಲರ ಮನದಲ್ಲಿ ಮಾಡಿದ್ದರು ರಾಮಪ್ಪ ಬಡಿಗೇರ. ಕೊಪ್ಪದಕೇರಿ, ಸೈದಾಪುರ ಜನತೆ ರಾಮಪ್ಪ ಬಡಿಗೇರ ನಿಧನದಿಂದ ಕಣ್ಣೀರಾಗಿದ್ದಾರೆ.
ಜನರೊಂದಿಗಿನ ನಡುವಳಿಕೆ ಸಮಾಜದ ಏಳಿಗೆಗಾಗಿ ಅವರು ತೆಗೆದುಕೊಳ್ಳುತ್ತಿದ್ದ ತೀರ್ಮಾನಗಳನ್ನ ಜನ ಕೊಂಡಾಡುತ್ತಿದ್ದರು. ರಾಮಪ್ಪ ಬಡಿಗೇರ ಸಾವು, ಈ ಭಾಗದ ಜನರನ್ನ ಮಮ್ಮುಲ ಮರುಗುವಂತೆ ಮಾಡಿದೆ.
