ಹುಬ್ಬಳ್ಳಿ ಬಿರಿಯಾನಿ ಸ್ಕ್ವೇರ್ ಹೊಟೇಲ್ ಗೆ ದಂಡ- ಯಾಕೆ ಗೊತ್ತಾ..
ಹುಬ್ಬಳ್ಳಿ: ಹುಬ್ಬಳ್ಳಿ ಮಹಾನಗರ ಪಾಲಿಕೆ ಅಧಿಕಾರಿಗಳು ಇಂದು ಜನತಾ ಬಜಾರ್ ಹತ್ತಿರದ ಸಿಟಿ ಕ್ಲಿನಿಕ್ ಎದುರಿನ ಬಿರಿಯಾನಿ ಸ್ಕೇರ್ ಹೋಟಲ್ ತಪಾಸಣೆ ನಡೆಸಿ 2 ಸಾವಿರ ದಂಡ ವಿಧಿಸಿದ್ದಾರೆ.
ಗ್ರಾಹಕರ ದೂರಿನ ಮೇಲೆ ಹೋಟಲ್ ತಪಾಸಣೆ ನಡೆಸಿದ ಅಧಿಕಾರಿಗಳು ಸ್ವಚ್ಛತೆ, ಗುಣಮಟ್ಟ ಪಾಲಿಸಿದೆ ಇರುವ ಕಾರಣ ದಂಡ ವಿಧಿಸಿದ್ದಾರೆ. ಹೊಟೇಲ್ ಗೆ ಹೋಗಿದ್ದ ಗ್ರಾಹಕರು ಸ್ವಚ್ಚತೆಯ ಬಗ್ಗೆ ಮಾಲೀಕರ ಗಮನಕ್ಕೆ ತಂದಿದ್ದರು. ಇದನ್ನ ಮಾಲೀಕ ಅಸಡ್ಡೆಯಿಂದ ತೆಗೆದುಕೊಂಡಿದ್ದರಿಂದ, ಗ್ರಾಹಕ ನೇರವಾಗಿ ಪಾಲಿಕೆಯ ಅಧಿಕಾರಿಗಳಿಗೆ ದೂರು ನೀಡಿದ್ದರು.
ಮುಂದಿನ ದಿನಗಳಲ್ಲಿ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆ ಕಾಪಾಡದಿದ್ದರೆ ಹೋಟಲ್ ಪರವಾನಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ತಪಾಸಣೆ ವೇಳೆ ಹಿರಿಯ ಆರೋಗ್ಯ ನಿರೀಕ್ಷಕ ಯಲ್ಲಪ್ಪ ಯರಗಂಟಿ ಸೇರಿದಂತೆ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು

