ಭೀಮಾತೀರದಲ್ಲಿ “ಮಾವಾ”- ‘ಮಾವ’ನಿಗೆ ಸಿಕ್ಕಿಬಿದ್ದ ಇಬ್ಬರು

ವಿಜಯಪುರ: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ಬೆಳಕಿಗೆ ಬರುತ್ತಿದಂತೆ ಮಾದಕ ವಸ್ತುಗಳ ಮಾರಾಟದ ವಿರುದ್ದ ಪೊಲೀಸ್ ಇಲಾಖೆ ಬಿರುಸಿನ ಕಾರ್ಯಾಚರಣೆ ನಡೆಸಿ ಭೀಮಾತೀರದ ಚಡಚಣದಲ್ಲಿ 50 ಕೆಜಿ ಮಾವಾ ಹಾಗೂ 120 ಕೆಜಿ ಕಚ್ಚಾ ಸಾಮಗ್ರಿಯನ್ನು ವಶಪಡಿಸಿಕೊಂಡಿದ್ದಾರೆ.
ವಿಜಯಪುರದಲ್ಲಿ ತಂಬಾಕು ಮಿಶ್ರಿತ ಮಾದಕ ವಸ್ತುವಿಗೆ ಮಾವಾ ಎಂದು ಕರೆಯಲಾಗತ್ತೆ. ಮಹಾರಾಷ್ಟ್ರದಲ್ಲಿಯೂ ಇದನ್ನ ಬಳಕೆ ಮಾಡಲಾಗತ್ತೆ. ಹಾಗಾಗಿಯೇ ಈ ಭಾಗದಲ್ಲಿಯೂ ಇದರ ಕಳ್ಳ ಸಾಗಣೆ ನಡೆಯುತ್ತೆ ಎಂಬುದನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ.
ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಆದರ್ಶ ನಗರದಲ್ಲಿ ಕಾರ್ಯಾಚರಣೆಯಲ್ಲಿ ಪತ್ರಾಸ್ ಶೆಡ್‌ನಲ್ಲಿ ನಿಷೇಧಿತ ಮಾವಾ ಅಡಗಿಸಿ ಇಡಲಾಗಿತ್ತು. ಚಡಚಣ ನಿವಾಸಿ ಸಲೀಂ ಸೈಪನ್‌ಸಾಬ ನದಾಫ (27) ಹಾಗೂ ಹಾವಿನಾಳದ ನಿವಾಸಿ ರಾಘವೇಂದ್ರ ಬಂದಪ್ಪ ಐಹೊಳ್ಳೆ (22) ಇವರನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದಾರೆ.