ಧಾರವಾಡದಲ್ಲಿ ವಸೀಮ ಶೇಖ್ ಬ್ರಿಜಾ ಕಾರು ಧಗಧಗ: ಆಗಿದ್ದಾದರೂ ಏನು ಗೊತ್ತಾ..
ಧಾರವಾಡ: ನವನಗರದಲ್ಲಿ ಹೇರ್ ಕಲರ್ ಮಾಡಿಸಿಕೊಂಡು ವೇಗವಾಗಿ ಬಂದ ಹಿನ್ನೆಲೆಯಲ್ಲಿ ಮಾರುತಿ ಬ್ರಿಜಾ ಕಾರಲ್ಲಿ ಬೆಂಕಿ ತಗುಲಿದ್ದು, ಕೆಲವೊತ್ತು ವಿದ್ಯಾಗಿರಿ ಪ್ರದೇಶದಲ್ಲಿ ಆತಂಕ ಮೂಡಿಸಿತ್ತು.
ಸುಮಾರು 11.35ರ ಸುಮಾರಿಗೆ ವಿದ್ಯಾಗಿರಿ ಪೆಟ್ರೋಲ್ ಬಂಕ್ ಸಮೀಪ ಕಾರು ಚಾಲಕ ವಾಹನವನ್ನ ನಿಲ್ಲಿಸಿದಾಗ ಬೆಂಕಿ ಆವರಿಸಿದೆ. ನವನಗರದಿಂದ ವೇಗವಾಗಿ ಬಂದಿದ್ದೇ ಇದಕ್ಕೆ ಕಾರಣವೆಂದು ಹೇಳಲಾಗಿದ್ದು, ಕಾರಿನಲ್ಲಿದ್ದ ವಸೀಮ್ ಶೇಖ ಹಾಗೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿಗೆ ಬೆಂಕಿ ತಗುಲಿದ ಪರಿಣಾಮ ಅಕ್ಕಪಕ್ಕದಲ್ಲಿ ಸಾಕಷ್ಟು ಆತಂಕ ಮೂಡಿಸಿತ್ತು. ಸ್ಥಳೀಯರು ಹಾಗೂ ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಕಾರಿನ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾದರು. ಪ್ರಕರಣ ವಿದ್ಯಾಗಿರಿ ಠಾಣೆಯಲ್ಲಿ ದಾಖಲಾಗಿದೆ.
