ಸ್ಮಾರ್ಟ್ ಸಿಟಿ ವರ್ಕ್: ಕಾಂಕ್ರೀಟ್ ಮಿಕ್ಸರ ಬ್ರೇಕ್ ಫೇಲ್- ಯೂ ಮಾಲ್ ಬಳಿ ಏನು ನಡೆದಿದೆ ಗೊತ್ತಾ..?
ಹುಬ್ಬಳ್ಳಿ: ಜೆಸಿ ನಗರದ ಬಳಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯ ಕಾಂಕ್ರೀಟ್ ಮಿಕ್ಸರ ಬ್ರೇಕ್ ಫೇಲ್ ಆಗಿ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದ್ದು, ಆಟೋ ಚಾಲಕನ ಸಮಯಪ್ರಜ್ಞೆಯಿಂದ ತನ್ನ ಪ್ರಾಣವನ್ನ ಉಳಿಸಿಕೊಂಡ ಘಟನೆ ಯೂ ಮಾಲ್ ಬಳಿ ನಡೆದಿದೆ.
ಸುಮಾರು ಐದೂವರೆ ಸಮಯಕ್ಕೆ ಜೆಸಿನಗರದಿಂದ ಯೂ ಮಾಲ್ ಗೆ ಬರುವ ರಸ್ತೆಯಲ್ಲಿಯೇ ಘಟನೆ ನಡೆದಿದ್ದು, ಆಟೋ ಚಾಲಕ ಲಕ್ಷ್ಮಣ ಹುಲಕೋಟಿ ತಕ್ಷಣವೇ ಹೊರಗೆ ಜಿಗಿದು ಪ್ರಾಣವನ್ನ ಉಳಿಸಿಕೊಂಡಿದ್ದಾನೆ.
ಘಟನೆಯಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸಂಚಾರಿಗಳಿಗೆ ತೊಂದರೆಯಾಗಿತ್ತು. ನಂತರ ಜೆಸಿಬಿಯನ್ನ ತಂದು ಸಿಮೆಂಟ್ ಮಿಕ್ಸರನ್ನ ಹೊರಗೆ ಎಳೆದು, ನಂತರ ರಸ್ತೆ ಸಂಚಾರವನ್ನ ಸುಗಮಗೊಳಿಸಿದರು.
ನಗರದಲ್ಲಿ ಸ್ಮಾರ್ಟ್ ಸಿಟಿಯ ಅವಘಡಗಳು ಒಂದಿಲ್ಲಾ ಒಂದು ರೀತಿಯಲ್ಲಿ ಮುಂದುವರಿದೆಯಿದ್ದು, ಸಂಬಂಧಿಸಿದವರು ಈ ಬಗ್ಗೆ ಗಮನ ಹರಿಸಬೇಕಾಗಿದೆ.