ಧಾರವಾಡ: ಲ್ಯಾಂಡ್ ಆರ್ಮಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಲ್ಲಿಕಾರ್ಜುನಗೌಡ ನಿಧನ
ಧಾರವಾಡ: ಹಲವು ವರ್ಷಗಳಿಂದ ಧಾರವಾಡದ ಲ್ಯಾಂಡ್ ಆರ್ಮಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಕೆಆರ್ ಡಿಎಲ್ ನ ಎಕ್ಸಿಕ್ಯೂಟಿವ್ ಇಂಜಿನಿಯರ್ ಜೆ.ಮಲ್ಲಿಕಾರ್ಜುನಗೌಡ ಕೊರೋನಾದಿಂದ ಮೃತಪಟ್ಟಿರುವುದಾಗಿ ಗೊತ್ತಾಗಿದೆ.
ದಾವಣಗೆರೆ ಕೆಟಿಜೆನಗರದ ಜೆ.ಮಲ್ಲಿಕಾರ್ಜುನ, ಧಾರವಾಡದ ಲ್ಯಾಂಡ್ ಆರ್ಮಿಯಲ್ಲಿ ಈ ಹಿಂದಿನಿಂದಲೂ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಇತ್ತೀಚೆಗೆ ಪದೋನ್ನತಿ ಸಿಕ್ಕಿದ್ದರಿಂದ, ಧಾರವಾಡದಲ್ಲಿಯೇ ಮುಂದುವರೆದಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಮಲ್ಲಿಕಾರ್ಜುನಗೌಡರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಅಕ್ಟೋಬರ್ 2ರಂದು ನಿಧನರಾಗಿದ್ದಾರೆ.
ಕೃಷಿ ಸಚಿವ ಬಿ.ಸಿ.ಪಾಟೀಲ ಸಂಬಂಧಿಯಾಗಿರುವ ಜೆ.ಮಲ್ಲಿಕಾರ್ಜುನಗೌಡ, ಧಾರವಾಡ ಜಿಲ್ಲೆಯಲ್ಲಿ ಲ್ಯಾಂಡ್ ಆರ್ಮಿಯ ಮೂಲಕ ಹಲವು ಕಾಮಗಾರಿಗಳನ್ನ ಆರಂಭಿಸಿದ್ದರು.