ಧಾರವಾಡ ಜಿಲ್ಲೆಗೆ ಬಂಪರ್: 14 ಪಿಯು ಕಾಲೇಜು ಮಂಜೂರ- ನವಲಗುಂದ, ಧಾರವಾಡ ಗ್ರಾಮೀಣಕ್ಕೆ ಪ್ರಾಶಸ್ತ್ಯ

ಬೆಂಗಳೂರು: ರಾಜ್ಯ ಸರಕಾರ ಮಹತ್ವದ ನಿರ್ಣಯವೊಂದನ್ನ ತೆಗೆದುಕೊಂಡಿದ್ದು, ಈಗಾಗಲೇ ಹಾಲಿಯಿರುವ ಪ್ರೌಢಶಾಲೆಯಲ್ಲಿ ಹೊಸದಾಗಿ ಪದವಿ ಪೂರ್ವ ಕಾಲೇಜುಗಳನ್ನ ಆರಂಭ ಮಾಡಲು ತೀರ್ಮಾನ ಮಾಡಲಾಗಿದ್ದು, ಧಾರವಾಡ ಜಿಲ್ಲೆಗೆ 14 ಕಾಲೇಜುಗಳನ್ನ ಮಂಜೂರ ಮಾಡಿ ಮತ್ತಷ್ಟು ಮಾಹಿತಿಯನ್ನ ಬಯಸಿದೆ.
ಜಿಲ್ಲೆಯ ನವಲಗುಂದ ಕ್ಷೇತ್ರದ ಅಣ್ಣಿಗೇರಿ ಸರಕಾರಿ ಪ್ರೌಢಶಾಲೆ, ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಸರಕಾರಿ ಪ್ರೌಢಶಾಲೆ, ಹುಬ್ಬಳ್ಳಿ ತಾಲೂಕಿನ ಬಿಡನಾಳ, ಗೋಕುಲ, ಹಳೇಹುಬ್ಬಳ್ಳಿ ನೇಕಾರನಗರ ಮತ್ತು ಸದಾಶಿವನಗರ, ಧಾರವಾಡ ಗ್ರಾಮೀಣದ ತಡಕೋಡ ಸೇರಿದಂತೆ ಜಿಲ್ಲೆಯಲ್ಲಿ 14 ಪ್ರೌಢಶಾಲೆಗಳಲ್ಲಿ ಪದವಿಪೂರ್ವ ಕಾಲೇಜು ಆರಂಭಿಸಲು ಅನುಮತಿಸಲು ಮುಂದಾಗಿದ್ದು, ಹಲವು ಮಾಹಿತಿಗಳನ್ನ ಕೇಳಲಾಗಿದೆ.
ಪದವಿಪೂರ್ವ ಶಿಕ್ಷಣ ಇಲಾಖೆಯ ಪತ್ರ ಸಂಬಂಧಿಸಿದ ಪ್ರೌಢಶಾಲೆಗಳಿಗೆ ಬಂದಿದ್ದು, ಉನ್ನತ್ತಿಕರಿಸಲು ಇರುವ ಅವಕಾಶ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮಾಹಿತಿಯನ್ನ ನೀಡುವಂತೆ ಕೋರಲಾಗಿದೆ.
ನಗರವೂ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಹಲವು ವರ್ಷಗಳಿಂದ ಕಾಲೇಜು ಆರಂಭಿಸಲು ಹಲವು ಬಾರಿ ಮನವಿಯನ್ನ ನೀಡಲಾಗಿತ್ತು. ಹೀಗಾಗಿ ಸರಕಾರವೇ ಈಗ ಪ್ರೌಢಶಾಲೆಗಳ ಉನ್ನತಿಗೆ ಮುಂದಾಗಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಸಮೂಹಕ್ಕೆ ಸಾಕಷ್ಟು ಅನುಕೂಲವಾಗಲಿದೆ.